Ticker

6/recent/ticker-posts

ಚಿಕ್ಕಪ್ಪನ ಅಕಸ್ಮಿಕ ನಿಧನದ ಬೆನ್ನಲ್ಲೇ 5 ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ


 ಚಿಕ್ಕಪ್ಪನ ಅಕಸ್ಮಿಕ ನಿಧನದ ಬೆನ್ನಲ್ಲೇ  5 ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಆಲಪುಯ ಹರಿಪ್ಪಾಡ್ ಎಂಬಲ್ಲಜನ ಶ್ರೀ ಶಬರಿ(10) ಮೃತಪಟ್ಟ ಬಾಲಕ. ನಿನ್ನೆ (ಮಂಗಳವಾರ) ಸಾಯಂಕಾಲ ಈತ ಶಾಲೆ ಬಿಟ್ಟು ಮನೆಗೆ ಬಂದಿದ್ದು ಸ್ನಾನದ ಮನೆಗೆ ಹೋಗಿದ್ದನೆನ್ನಲಾಗಿದೆ. ಅರ್ದ ಗಂಟೆ ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಬಾಗಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂತು. ಕೂಡಲೇ ಹಗ್ಗ ತುಂಡರಿಸಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. 10 ದಿನಗಳ ಹಿಂದೆ ಶ್ರೀಶಬರಿಯ ಚಿಕ್ಜಪ್ಪ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಈ ಘಟನೆಯ ನಂತರ ಶ್ರೀಶಬರಿ ಮಾನಸಿಕವಾಗಿ ನೊಂದಿದ್ದು ಯಾರ ಜತೆಯೂ ಬೆರೆಯುತ್ತಿರಲಿಲ್ಲ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ

Post a Comment

0 Comments