Ticker

6/recent/ticker-posts

ಅತಿ ತೀವ್ರ ಮಳೆ ಸಾಧ್ಯತೆ; ಕಾಸರಗೋಡು ಜಿಲ್ಲೆಯಲ್ಲಿ 5 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ


 ತಿರುವನಂತಪುರಂ: ಉತ್ತರ ಕೇರಳದ ವಿವಿದ ಜಿಲ್ಲೆಗಳಲ್ಲಿ ಇಂದಿನ ಭಾರೀ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ.  ಭಾರೀ ಮಳೆಯ ಜತೆಗೆ ಬಲವಾದ ಗಾಳಿಯೂ ಬೀಸಲಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು ಸಹಿತ ವಿವಿದ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ( ಮಂಗಳವಾರ) ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ, ನಾಳೆ (ಬುದವಾರ) ಕಾಸರಗೋಡು, ಕಣ್ಣೂರು, ತ್ರಿಶೂರ್, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಿದೆ. ಗುರುವಾರ, ಶುಕ್ರವಾರ, ಶನಿವಾರಗಳಂದು ಸಹ ಕಾಸರಗೋಡು, ಕಣ್ಣೂರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಆಗಿರುತ್ತದೆ. ಈ ದಿನಗಳಲ್ಲಿ ಭಾರೀ ಗಾಳಿ ಬೀಸಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರವಹಿಸಲು ಸೂಚಿಸಲಾಗಿದೆ

Post a Comment

0 Comments