ಬೆಳಗ್ಗಿನ ತಿಂಡಿ ಸೇವಿಸುವ ಮಧ್ಯೆ ಅದು ಗಂಟಲಲ್ಲಿ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಪಯ್ಯನ್ನೂರು ಕುಞಮಂಗಲಂ ಪುತ್ತನ್ ವೀಟಿಲ್ ಕಮಲಾಕ್ಷಿ ಮೃತಪಟ್ಟ ಮಹಿಳೆ. ಇಂದು (ಶನಿವಾರ) ಬೆಳಗ್ಗೆ 7 ಗಂಟೆಯ ವೇಳೆ ಈ ದಾರುಣ ಘಟನೆ ನಡೆಯಿತು.
ಉಪಹಾರ ಸೇವಿಸುವ ಮಧ್ಯೆ ಕಮಲಾಕ್ಷಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅವರು ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದರು
0 Comments