ಬದಿಯಡ್ಕ: ವೈದ್ಯರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಇದರ ವತಿಯಿಂದ ಡಾ.ಶ್ರೀನಿಧಿ ಸರಳಾಯರನ್ನು ಅಭಿನಂದಿಸಲಾಯಿತು. ಜಗನ್ನಾಥ ರೈ ಕೊರೆಕಾನ ಶಾಲು ಹೊದಿಸಿದರು.
ಕೇಶವ ಪಾಟಾಳಿ ಸ್ಮರಣಿಕೆಯನ್ನು ನೀಡಿದರು. ರಮೇಶ್ ಆಳ್ವ ಹಣ್ಣು ಹಂಪಲು ನೀಡಿದರು. ಸಂತೋಷ್ ಮಾಸ್ತರ್ ಅವರು ವೈದ್ಯರ ದಿನಾಚರಣೆಯ ಮಹತ್ವ, ವೈದ್ಯರ ಮಹತ್ವ ಹಾಗೂ ಡಾ.ಶ್ರೀನಿಧಿ ಸರಳಾಯರು ಗೈಯ್ಯುತ್ತಿರುವ ಸೇವೆಗಳ ಬಗ್ಗೆ ವಿವಿರವಾದ ಮಾಹಿತಿ ನೀಡಿದರು.
ಶ್ವಾಸಕೋಶ ತಜ್ಞ ಡಾ.ನಾರಾಯಣ ಪ್ರದೀಪ, ಗೋಪಿ ಬದಿಯಡ್ಕ, ಮುಂತಾದವರು ಉಪಸ್ಥಿತರಿದ್ದರು
0 Comments