Ticker

6/recent/ticker-posts

ಸಹಸ್ರೋಪಾದಿ ಭಕ್ತ ಜನ ಸಾಗರದ ನಡುವೆ ಅಂಬಾರು ಕ್ಷೇತ್ರದಲ್ಲಿ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ ಸಂಪನ್ನ

 

ಉಪ್ಪಳ: ಅತ್ಯಾಪೂರ್ವವಾದ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗಕ್ಕೆ  ಸಹಸ್ರೋಪಾದಿಯಾಗಿ ಹರಿದು ಬಂದ ಭಕ್ತ ಜನ ಸಾಗರ ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಹೊಸ ಇತಿಹಾಸ ಸೃಷ್ಟಿಸಿತು. 

ನಗರ ಪ್ರದೇಶದಿಂದ ನಾಡಿನ ಈ ಮೂಲೆ ಜನ ಪ್ರಾತಃಕಾಲದಿಂದಲೇ ಶುಚೀರ್ಭೂತರಾಗಿ ಬಂದು ಸೇವಾ ಸಂಕಲ್ಪಗೈದು ಭಕ್ರಿಶ್ರದ್ಧಾ ಫೂರ್ವಕ ಯಾಗದಲ್ಲಿ ಪಾಲ್ಗೊಂಡು ಕೃತಾರ್ಥರಾದರು.  

 

ಬ್ರಹ್ಮಕಲಶೋತ್ಸವದ ಬಳಿಕ ಶ್ರೀಕ್ಷೇತ್ರಕ್ಕೆ ಇಷ್ಟೊಂದು ಜನ ಸಾಗರ ಹರಿದು ಬಂದಿರುವುದು ಇದೇ ಪ್ರಥಮತಃ ಎಂಬುದು ದಾಖಲಾರ್ಹ ವಿಷಯವಾಯಿತು. 

ವಿವಾಹ ಪ್ರತಿಬಂಧಕ ನಿವಾರಣೆ ಹಾಗೂ ಲೋಕ ಕಲ್ಯಾಣಾರ್ಥದ ಸದುದ್ದೇಶದಿಂದ ಯಾಗ ಸಮಿತಿ ಹಮ್ಮಿಕೊಂಡ ಪ್ರತಿಯೊಂದು ಹೆಜ್ಜೆಯ ನಡೆಯು ಇಂದು ಮೊದಲ ಯಶಸ್ಸಿನ ಫಲ ಕಂಡ ಸಾರ್ಥಕತೆ ಪದಾಧಿಕಾರಿಗಳದ್ದಾಗಿದೆ. ಪ್ರಾತಃಕಾಲ ಶ್ರೀ ಬಾಲಗಣಪತಿ ಹವನದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಬಳಿಕ ಭಜನೆ ಸಂಕೀರ್ತನೆ,ಮಹಾಪೂಜೆ ನಡೆದು ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ ಸಂಕಲ್ಪ ನಡೆಯಿತು. 

ದೇವಸ್ಥಾನದ ಪ್ರಾಂಗಣದಲ್ಲಿ ಭಕ್ತಾದಿಗಳಿಗೆ ಸಾಲಾಗಿ ಕುಳಿತು ಸಂಕಲ್ಪ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿತ್ತು.ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವಾಸುದೇವ ಹೊಳ್ಳ ಇವರ ನೇತೃತ್ವದಲ್ಲಿ ಪ್ರಾರಂಭಗೊಂಡ  ಸ್ವಯಂವರ ಪಾರ್ವತಿ ಯಾಗವನ್ನು ಅರ್ಚಕ ವೃಂದ ಅರ್ಥಪೂರ್ಣವಾಗಿ ನೇರೆವೇರಿಸಿತು. 

ಯಾಗ ಪೂರ್ಣಾಹುತಿ ಸಂದರ್ಭಕ್ಕೆ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಹಾಗೂ ಉದ್ಯಮಿ ದಾನಿ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮೊದಲಾದ ಗಣ್ಯರು ಆಗಮಿಸಿದ್ದರು.  

ಪೂರ್ಣಾಹುತಿ ಬಳಿಕ ಪ್ರಸಾದ ವಿತರಣೆ, ಶಿವಗಂಗಾ ಕಲಾ ಮಂಟಪದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಮಧ್ಯಾಹ್ನದ ಪ್ರಸಾದ ಭೋಜನ ಸ್ವೀಕರಿಸಿದರು.ಬಳಿಕ ಸ್ವಾಮಿ ಕೊರಗಜ್ಜ ಕುಣಿತ ಭಜನಾ ತಂಡ ಅಡ್ಕ ವೀರನಗರ, ಮಾತ ಕುಣಿತ ಭಜನಾ ತಂಡ ಐಲ ಪಾರಕಟ್ಟೆ,ಪ್ರಗತಿನಗರ ಮುಟ್ಟಂ ಭಜನಾ ತಂಡದವರಿಂದ ಕುಣಿತ ಭಜನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Post a Comment

0 Comments