Ticker

6/recent/ticker-posts

ನೀರು ಮನೆಗೆ ಹರಿದು ಅವ್ಯವಸ್ಥೆ; ಬಾಯಾರು ಸದಾಶಿವ ಶೆಟ್ಟಿ ಸೇವಾ ಬಳಗದ ಸದಸ್ಯರಿಂದ ಶ್ರಮದಾನ


 ಪೈವಳಿಕೆ:ಅತಿ ತೀವ್ರ ಮಳೆಯಿಂದ  ಬಲ್ಲೂರು ನಿವಾಸಿ ನಾರಾಯಣ  ಮೂಲ್ಯ ರವರ ಮನೆಗೆ ನೀರು ನುಗ್ಗಿ ಅವ್ಯವಸ್ಥೆಯುಂಟಾಯಿತು. ಮಳೆ ನೀರು ಮನೆಯೊಳಗೆ ಹರಿದು ಬಂದು ಮನೆ ಮಂದಿಗೆ ತೊಂದರೆಯುಂಟಾಯಿತು.  ಅವರ ಮನೆಯ ಹತ್ತಿರ ನೀರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಈ ದುಸ್ಥಿತಿ ಬಂದಿತ್ತು. ಈ ಮಾಹಿತಿ ತಿಳಿದ ಸದಾಶಿವ ಶೆಟ್ಟಿ ಸೇವಾ ಬಳಗ   ಬಾಯಾರು ಘಟಕವು ಕೂಡಲೇ ನಾರಾಯಣ ಮೂಲ್ಯರ ದುಸ್ಥಿತಿಗೆ ಸ್ಪಂದಿಸಿತು. ಸದಾಶಿವ ಶೆಟ್ಟಿ ಸೇವಾ ಬಳಗದ ವತಿಯಿಂದ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಲಾಯಿತು ರಾತ್ರಿ ಇಡೀ ಮನೆಗೆ ನೀರು ನುಗ್ಗಿ ಅವ್ಯವಸ್ಥೆಯಿಂದ ನರಳಾಡಿದ ಮನೆಯವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ ಶ್ರೀ ಸದಾಶಿವ ಶೆಟ್ಟಿ ಬಾಯಾರು ಇದರ ಸದಸ್ಯರಿಗೆ ನಾರಾಯಣ ಮೂಲ್ಯ ಹಾಗೂ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ

Post a Comment

0 Comments