ಮುಳ್ಳೇರಿಯ: ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಆದೂರು ಆಲಂತ್ತಡ್ಕ ನಿವಾಸಿ ಅಶೋಕ ಆಚಾರ್ಯ (46) ನಿಧನರಾದರು. ಅಸೌಖ್ಯ ನಿಮಿತ್ತ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಇಂದು (ಶುಕ್ರವಾರ) ಅವರು ಕೊನೆಯುಸಿರೆಳೆದರು.
ಬಡಗಿ ವೃತ್ತಿ ಮಾಡುತ್ತಿದ್ದ ಅಶೋಕ ಆಚಾರ್ಯರಿಗೆ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಎರಡೂ ಕಿಡ್ನಿ ವೈಫಲ್ಯ ಗಮನಕ್ಕೆ ಬಂತು. ಇವರ ಅನಾರೋಗ್ಯಕ್ಕೆ ಸ್ಪಂದಿಸಿದ ಕಾರಡ್ಕ ಪಂಚಾಯತಿನ ಜನಪ್ರತಿನಿಧಿಗಳು, ಸಾರ್ವಜನಿಕರು ಚಿಕಿತ್ಸಾ ಸಮಿತಿ ರಚಿಸಿ ನಿಧಿ ಸಂಗ್ರಹ ಆರಂಭಿಸಿದ್ದರು. ಬಸ್ಸುಗಳು ಕಾರುಣ್ಯ ಯಾತ್ರೆ ನಡೆಸಿದ್ದವು. ಈ ಮಧ್ಯೆ ಅವರ ಅಸೌಖ್ಯ ಉಲ್ಬಣಗೊಂಡು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.
ಮೃತರು ತಂದೆ ಚಂದ್ರ ಆಚಾರಿ, ತಾಯಿ ಕಮಲಾಕ್ಷಿ, ಪತ್ನಿ ಶುಭ ಲಕ್ಷ್ಮಿ, ಮಕ್ಕಳಾದ ದೇವಿಕ, ದೀಕ್ಷ, ದಿಲ್ನ, ಸಹೋದರ ಸಹೋದರಿಯರಾದ ಹರೀಶ ಆಚಾರ್ಯ, ಆಶಾ, ಅನಿತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಶೋಕ ಆಚಾರ್ಯರ ಅಕಸ್ಮಿಕ ನಿಧನವು ಆದೂರು, ಆಲಂತಡ್ಕ ಪರಿಸರದಲ್ಲಿ ಶೋಕ ಸಾಗರ ಸೃಷ್ಟಿಸಿದೆ.
0 Comments