Ticker

6/recent/ticker-posts

ಉದ್ಯೋಗ ಖಾತರಿ ಕಾರ್ಮಿಕೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು‌


 ಕಾಸರಗೋಡು: ಉದ್ಯೋಗ ಖಾತರಿ ಕಾರ್ಮಿಕೆ ಮನೆಯಲ್ಲಿ ಅಡುಗೆ ಮಾಡುತ್ತಿರುವ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೊಯ್ನಾಚಿ ಪರಂಬ ಕುಂಡಡ್ಕ ನಿವಾಸಿ, ದಿವಂಗತರಾದ ಕೋರನ್- ಕುಞಪೆಣ್ಣ್ ದಂಪತಿಯ ಪುತ್ರಿ ಸುಧ(37) ಮೃತಪಟ್ಟ ಮಹಿಳೆ. ಇಂದು (ಮಂಗಳವಾರ) ಬೆಳಗ್ಗೆ ಇವರು ಮನೆಯಲ್ಲಿ ಅಡುಗೆ ತಯಾರಿಸುವ ವೇಳೆ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ  ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ಪುತ್ರಿ ರಜಿತ, ಸಹೋದರ ಸಹೋದರಿಯರಾದ ಕುಟ್ಯನ್, ಅಪ್ಪಕುಞ, ಕುಮಾರನ್, ನಾರಾಯಣ, ದೇವಕಿ, ಜಾನಕಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments