Ticker

6/recent/ticker-posts

ಭಾರೀ ಮಳೆಯಿಂದಾಗಿ ವರ್ಕಾಡಿಯ ವಿವಿದೆಡೆ ವ್ಯಾಪಕ ನಾಶನಷ್ಟ; ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಿವಿದೆಡೆ ಬೇಟಿ


 ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ವಿಧಾನಸಭಾ ಕ್ಷೇತ್ರದ ವೋರ್ಕಾಡಿ ಪಂಚಾಯತ್ ವ್ಯಾಪ್ತಿಯ ವೋರ್ಕಾಡಿ, ಬೊಡೋಡಿ, ಮತ್ತು ಪೊಯ್ಯತ್ ಬಯಲು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಕೃಷಿ ಮತ್ತು ಆಸ್ತಿಪಾಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ. ಅಲ್ಲದೆ, ತಿಮ್ಮಂಗನೂರು ಅಣೆ-ನಡಿಬಯಲು ರಸ್ತೆಯಲ್ಲಿ ಭೂಕುಸಿತದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.


ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್., ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ವೋರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ್ ಪೊಯ್ಯ, ಹಿರಿಯ ಮುಖಂಡ ಧೂಮಪ್ಪ ಶೆಟ್ಟಿ, ಹಾಗೂ ಪಂಚಾಯತ್ ಜನಪ್ರತಿನಿಧಿ ಪದ್ಮಾವತಿ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು.

Post a Comment

0 Comments