ಕಾಸರಗೋಡು: ಬಿಜೆಪಿ ಚೆಮ್ನಾಡು ಪಂಚಾಯತು 13 ನೇ ವಾರ್ಡು ಕಾರ್ಯಕರ್ತರ ಸಮಾವೇಶ ನಡೆಯಿತು. ಪಕ್ಷದ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಉದ್ಘಾಡಿಸಿದರು. ಸರಕಾರದ ಯೋಜನೆಗಳಲ್ಲಿನ ಭ್ರಷ್ಟಾಚಾರದ ಜತೆಗೆ ಭಕ್ತರು ದೇವಸ್ಥಾನಗಳಲ್ಲಿ ಹಾಕುವ ಕಾಣಿಕೆಯನ್ನು ಸಹ ಪಿಣರಾಯಿ ಸರಕಾರ ದರೋಡೆ ಮಾಡುತ್ತಿದೆ ಎಂದವರು ಹೇಳಿದರು.
ವಿಜಯನ್ ವಣ್ಣಾತ್ತಿಕಡವ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಇತರರಾದ ಕೆ.ಟಿ.ಪುರುಷೋತ್ತಮನ್, ಸೌಮ್ಯ, ನಾರಾಯಣನ್ ವಡಕ್ಕಿನಿಯ, ಸದಾಶಿವನ್ ಮಣಿಯಂಗಾನಂ, ಸುಚಿತ್ರ ಮೊದಲಾದವರು ಉಪಸ್ಥಿತರಿದ್ದರು

0 Comments