Ticker

6/recent/ticker-posts

Ad Code

ಕೆಂಪು ಕೋಟೆ ಬಳಿ ಕಾರು ಸ್ಪೋಟಗೊಂಡು 13 ಮಂದಿ ಮೃತಪಟ್ಟ ಘಟನೆ; ಭಯೋತ್ಪಾದಕ ಉಮರ್ ನಬಿಯ ಮನೆ ಬಾಂಬು ಸಿಡಿಸಿ ದ್ವಂಸಗೊಳಿಸಿದ ಸೇನೆ


 ನವದೆಹಲಿ: ನವದೆಹಲಿ ಕೆಂಪು ಕೋಟೆಯ ಬಳಿ ಕಾರು ಸ್ಪೋಟಗೊಂಡು13 ಮಂದಿ ಮೃತಪಟ್ಟ ಘಟನೆಯಲ್ಲಿ ಕಾರು ಚಲಾಯಿಸಿದ ಭಯೋತ್ಪಾದಕ ಉಮರ್ ನಬಿಯ ಮನೆಯನ್ನು ಸೇನೆ ದ್ವಂಸಗೊಳಿಸಿದೆ. ಜಮ್ಮು ಕಾಶ್ಮೀರದ ಪುಲ್ಗಾಮದಲ್ಲಿರುವ ಮನೆಯನ್ನು ಸೈನಿಕರು ಬಾಂಬು ಸ್ಪೋಟಗೊಳಿಸಿ ದ್ವಂಸಗೈದಿದ್ದಾರೆ. ಭಯೋತ್ಪಾದಕ ಉಮರ್ ನಬಿಯ ತಂದೆ, ತಾಯಿ ಹಾಗೂ ಇತರ ಸಂಬಂಧಿಕರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಕೆಂಪು ಕೋಟೆಯ ಬಳಿ ಬಾಂಬು ಸ್ಪೋಟಗೊಂಡ ಘಟನೆ ನಡೆದ ಕೂಡಲೇ ಇವರನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿತ್ತು. ಪ್ರಾದೇಶಿಕ ಭಯೋತ್ಪಾದಕರ ವಿರುದ್ದ ತನಿಖಾ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದು ಅದರಂತೆಯೇ ಉಮರ್ ನಬಿ ಮನೆಯನ್ನು ದ್ವಂಸಗೊಳಿಸಲಾಗಿದೆ. ಈ ಹಿಂದೆ ಪಹಲ್ಗಾಂ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದವರ ಮನೆ ಇದೇ ರೀತಿ ದ್ವಂಸಗೊಳಿಸಲಾಗಿತ್ತು.

Post a Comment

0 Comments