Ticker

6/recent/ticker-posts

Ad Code

16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಪುತ್ತೂರು ಬಳಿ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

 

ಬದಿಯಡ್ಕ: 16 ವರ್ಷದ ಬಾಲಕಿಗೆ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ನೆಟ್ಟಣಿಗೆ, ಕಿನ್ನಿಂಗಾರು ಈಂದುಮೂಲೆ ನಿವಾಸಿ  ಶ್ರೀಕೃಷ್ಣ ಯಾನೆ ಸುಮಂತ್(21) ಬಂಧಿತ ಆರೋಪಿ. ಬದಿಯಡ್ಕ ಇನ್ಸ್ಪೆಕ್ಟರ್ ಎ.ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಎಸ್.ಐ.ರೂಪೇಶ್ ಆರೋಪಿಯನ್ನು ಬಂಧಿಸಿದ್ದಾರೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ನವಂಬರ್ 14 ರಂದು ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದರು. ಮಾಹಿತಿ ತಿಳಿದ ಶ್ರೀಕೃಷ್ಣ ತಲೆಮರೆಸಿಕೊಂಡಿದ್ದನು. ಈತನನ್ನು ಪುತ್ತೂರು ಕುಂಬ್ರದಿಂದ ಬಂಧಿಸಲಾಯಿತು

Post a Comment

0 Comments