Ticker

6/recent/ticker-posts

Ad Code

ಪಂಚಾಯತು ಚುನಾವಣೆ; ದಾಖಲೆಗಳಿಲ್ಲದ ಹಣ ಸಾಗಾಟ ವ್ಯಾಪಕ, 23.5 ಲಕ್ಷ ರೂ.ವಶಪಡಿಸಿದ ಪೊಲೀಸರು

 



ಮಜೇಶ್ವರ: ಸ್ಥಳೀಯಾಡಳಿತ ಚುನಾವಣೆಯ ಅಂಗವಾಗಿ ಕೇರಳ-ಕರ್ಣಾಟಕ ಗಡಿ ಪ್ರದೇಶವಾದ ತಲಪ್ಪಾಡಿಯಲ್ಲಿ ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ ದಾಖಲೆಗಳಿಲ್ಲದ 23.5 ಲಕ್ಷ ರೂ.ವಶಪಡಿಸಲಾಗಿದೆ. ಎಸ್.ಐ.ಕೆ.ಆರ್.ಉಮೇಶ್ ನೇತೃತ್ವದಲ್ಲಿ ಆದಿತ್ಯವಾರ ನಡೆಸಿದ ತಪಾಸಣೆ ವೇಳೆ ಕಾರಿನ ಹಿಂದಿನ ಸೀಟಿನಡಿಯಿಂದ 13.5 ಲಕ್ಷ ರೂ ವಶಪಡಿಸಲಾಗಿದೆ. ನಿನ್ನೆ (ಸೋಮವಾರ)  ಎಸ್.ಐ. ವೈಷ್ಣವ್ ನೇತೃತ್ವದಲ್ಲಿ ನಡೆದ ವಾಹನ ತಪಾಸಣೆ ವೇಳೆ ದಾಖಲೆಗಳಿಲ್ಲದ 10 ಲಕ್ಷ ರೂ.ವಶಪಡಿಸಲಾಗಿದೆ. ಹಣವನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

Post a Comment

0 Comments