ಬದಿಯಡ್ಕ: ನೀರ್ಚಾಲು ಮೇಲಿನ ಪೇಟೆಯಲ್ಲಿ ಜುಗಾರಿ (ಪುಳ್ಳಿ ಮುರಿ) ಆಟದಲ್ಲಿ ನಿರತರಾಗಿದ್ದ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಇವರು ಆಟಕ್ಕೆ ಬಳಸಿದ 3100 ರೂ.ವಶಪಡಿಸಲಾಗಿದೆ.
ನೀರ್ಚಾಲು ಕಾಕುಂಜೆಯ ನವೀನ್(40), ರವಿರಾಜ್(35), ಎದಿರ್ತೋಡು ನಿವಾಸಿ ಹರೀಶ(36) ಬಂಧಿತ ಆರೋಪಿಗಳು. ಕಂಡರೆ ಪತ್ತೆಹಚ್ಚಬಹುದಾದ ಇಬ್ಬರು ಓಡಿ ಪರಾರಿಯಾಗಿದ್ದು ಅವರನ್ನು ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನೀರ್ಚಾಲು ಮೇಲಿನ ಪೇಟೆಯಲ್ಲಿ ನಿನ್ನೆ (ಬುದವಾರ) ಮಧ್ಯಾಹ್ನ ಈ ಕಾರ್ಯಾಚರಣೆ ನಡೆದಿದೆ. ಬದಿಯಡ್ಕ ಎಸ್.ಐ.ಸಾವ್ಯ ಸಚಿನ್ ಅವರು ಕಾರ್ಯಾಚರಣೆಗೆ ನೇತೃತ್ವ ನೀಡಿದರು

0 Comments