Ticker

6/recent/ticker-posts

Ad Code

ಚಕ್ರ ಸ್ಪೋಟಗೊಂಡು ಮಗುಚಿ ಬಿದ್ದ ಮೀನು ಸಾಗಾಟದ ಲಾರಿ; 3ಗಂಟೆಗಳ ಕಾಲ ಮೊಟಕುಗೊಂಡ ವಾಹನ ಸಂಚಾರ, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ


 ಕಾಸರಗೋಡು:  ಮೀನು ಸಾಗಾಟದ ಲಾರಿ ಚಕ್ರ ಸ್ಪೋಟಗೊಂಡು ಮಗುಚಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಮೊಗ್ರಾಲು ಪುತ್ತೂರಿನಲ್ಲಿ ನಡೆದಿದೆ. ಕೋಜಿಕ್ಕೋಡಿನಿಂದ ಮೀನು ಹೇರಿ ಬರುತ್ತಿದ್ದ ಲಾರಿ ಮೊಗ್ರಾಲು ಪುತ್ತೂರು ತಲುಪಿದಾಗ ಚಕ್ರ ಸ್ಪೋಟಗೊಂಡಿದ್ದು‌ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕ ವಡಗರ ನಿವಾಸಿ ವಿಜಿನ್ ಕುಮಾರ್(35) ಗಾಯಗಳಿಲ್ಲದೆ ಪಾರಾದರು. ಸ್ಥಳೀಯರು ನೀಡಿದ ಮಾಹಿತಿಯಂತೆ ಆಗಮಿಸಿದ ಅಗ್ನಿಶಾಮಕ ದಳ ಸಿಬಂದಿಗಳು ಲಾರಿಯಲ್ಲಿದ್ದ ಮೀನು ಬೇರೆ ಲಾರಿಗಳಿಗೆ ಹೇರಿ ವಾಹನ ಸಂಚಾರ ಸುಗಮಗೊಳಿಸಿದರು. ಸೀನಿಯರ್ ಫಯರ್ ಅಂಡ್ ರೆಸ್ಕ್ಯೂ ಆಫೀಸೆದ ವಿ.ಎನ್.ವೇಣುಗೋಪಾಲ ಅವರ ನೇತೃತ್ವದಲ್ಲಿ  ಇತರರಾದ ಇ.ಪ್ರಸೀದ್, ಶಿಬಿಲ್ ಕುಮಾರ್, ರಾಜೇಶ್, ಅರುಣ್ ಕುಮಾರ್, ಜಿತಿನ್ ಕೃಷ್ಣನ್, ಜಿಜೊ, ಅಥುಲ್ ರವಿ, ಹೋಂ ಗಾರ್ಡುಗಳಾದ ಪಿ.ವಿ.ರಂಜಿತ್, ಕೆ.ಸುಮೇಶ್ ಮೊದಲಾದವರು ಭಾಗವಹಿಸಿದರು. ಮಗುಚಿ ಬಿದ್ದಿದ್ದ ಲಾರಿಯನ್ನು ಕ್ರೇನ್ ಬಳಸಿ ಮೇಲಕೆತ್ತಲಾಯಿತು

Post a Comment

0 Comments