Ticker

6/recent/ticker-posts

Ad Code

ಕೇರಳಕ್ಕೆ 3 ನೇ ವಂದೇ ಭಾರತ್ ರೈಲು, ಇಂದು ಪ್ರಧಾನಮಂತ್ರಿ ಉದ್ಘಾಟನೆ‌‌


 ಎರ್ನಾಕುಲಂ: ಕೇರಳದ 3 ನೇ ವಂದೇ ಭಾರತ್ ರೈಲು ಉದ್ಘಾಟನೆ ಇಂದು (ಶನಿವಾರ) ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಎರ್ನಾಕುಲಂ ಸೌತ್ ರೈಲ್ವೇ ಸ್ಟೇಷನ್ ನಲ್ಲಿ ನಡೆಯಲಿದ್ದು ಕೇಂದ್ರ ಸಚಿವರುಗಳಾಗ ಸುರೇಶ್ ಗೋಪಿ, ಜಾರ್ಜ್ ಕುರ್ಯನ್, ಇತರರು ಭಾಗವಹಿಸುವರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾರಣಾಶಿಯಲ್ಲಿ ಹಸಿರು ನಿಶಾನೆ‌ ಮೂಲಕ ಉದ್ಘಾಟಿಸುವರು.

  ಬೆಳಗ್ಗೆ 5.10 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು 1.50 ಕ್ಕೆ ಎರ್ನಾಕುಲಂ ತಲುಪಲಿದೆ. 2.20 ಕ್ಕೆ ಹೊರಟು ರಾತ್ರಿ 11 ಗಂಟೆಗೆ ಬೆಂಗಳೂರು ತಲುಪಲಿದೆ. ಎರ್ನಾಕುಲಂ, ತ್ರಿಶೂರ್, ಶೊರ್ಣೂರು, ಪಾಲಕ್ಕಾಡ್, ಪೊದನೂರು, ಕೊಯಮತ್ತೂರು, ತಿರುಪೂರ್, ಈರೋಡ್, ಸೇಲಂ, ಜೋಲಾರ್ ಪೇಟ್ಡ, ಕೃಷಗಣರಾಜಪುರಂ ಮೂಲಕ ಕೆ.ಆರ್.ಎಸ್ ಬೆಂಗಳೂರು ತಲುಪಲಿದೆ

Post a Comment

0 Comments