ಯುವತಿಗಳಿಬ್ಬರ ಸಲಿಂಗ ಕಾಮಕ್ಕೆ ಸ್ವಂತ ಮಗುವೊಂದು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ 5 ತಿಂಗಳ ಹಸುಳೆಯನ್ನು ಹೆತ್ತಬ್ಬೆಯೇ ಕೊಂದ ಘಟನೆ ವರದಿಯಾಗಿದೆ.
ತಮಿಳುನಾಡಿನ ಕೆಳಮಂಗಲ ಎಂಬಲ್ಲಿ ಹೀನ ಕೃತ್ಯ ನಡೆದಿದೆ.
26 ವರ್ಷದ ಭಾರತಿ ಎನ್ನುವ ವಿವಾಹಿತೆಯ ಜೊತೆ 22 ವರ್ಷದ ಯುವತಿ ಸುಮಿತ್ರಾ ಸಲಿಂಗಕಾಮ ಇತ್ತು. ಕಾಮದಾಟಕ್ಕೆ ಮಗು ಅಡ್ಡಿಯಾಯ್ತು ಎನ್ನುವ ಕಾರಣಕ್ಕೆ ಇಬ್ಬರೂ ಸೇರಿ ಐದು ತಿಂಗಳ ಹಸುಗೂಸನ್ನು ಮುಗಿಸಿದ್ದಾರೆ.
ಸುರೇಶ್ ಮತ್ತು ಭಾರತಿ ಎಂಬುವವರಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಐದು ತಿಂಗಳ ಹಿಂದೆ ಗಂಡು ಮಗುವೊಂದಕ್ಕೆ ಭಾರತಿ ಜನ್ಮ ನೀಡಿದ್ದಳು. ಆದರೆ, ಮಗು ಆದ ದಿನದಿಂದ ಭಾರತಿ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಸುಮಿತ್ರಾ ಗಲಾಟೆ ಮಾಡಿದ್ದಳು.
ತಮ್ಮ ಮಧ್ಯೆ ಮಗುವಿನಿಂದಲೇ ಈ ಗಲಾಟೆ, ಆದ್ದರಿಂದ ಮಗುವನ್ನು ಮುಗಿಸಿಬಿಡು ಎಂದು ಸುಮಿತ್ರಾ, ಭಾರತಿಗೆ ತಿಳಿಸಿದ್ದಳು.
ಅದರಂತೆ ಭಾರತಿ ಮಗುವಿನ ಉಸಿರುಗಟ್ಟಿಸಿ ಮುಗಿಸಿದ್ದಳು. ಬಳಿಕ ಹಾಲು ಕುಡಿಯುವಾಗ ಹಾಲು ಹಸುಳೆಯ ನೆತ್ತಿಗೇರಿ ಸಾವನ್ನಪ್ಪಿದೆ ಅಂತಾ ಕಥೆ ಕಟ್ಟಿದ್ದಳು. ಮಗುವಿನ ಅಂತ್ಯಕ್ರಿಯೆ ನಡೆಸಲಾಯಿತು.
ಸುಮಿತ್ರ ಮತ್ತು ಭಾರತಿ ಬಳಸುತ್ತಿದ್ದ ಪ್ರತ್ಯೇಕ ಮೊಬೈಲ್ ಇತ್ತೀಚೆಗೆ ಸುರೇಶ್‌ಗೆ ಸಿಕ್ಕಿತ್ತು. ವಾಟ್ಸಪ್ ನಲ್ಲಿ ಇಬ್ಬರ ಸಲಿಂಗ ಕಾಮದ ವಿಷಯ ಮತ್ತು ಮಗುವಿನ ಕೊಲೆ ರಹಸ್ಯ ತಿಳಿದು ಬಂದಿತ್ತು. ಇದರಂತೆ ಪತಿ ಪ್ರಕರಣ ದಾಖಲಿಸಿದ್ದ. ಪೋಲಿಸ್ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

0 Comments