Ticker

6/recent/ticker-posts

Ad Code

ಬಿ.ಸಿ.ರೋಡಿನಲ್ಲಿ ಬುರ್ಖಾ ಧರಿಸಿ ಬಂದ ಪತ್ನಿಯಿಂದ ಪತಿಗೆ ಇರಿತ


ಬಂಟ್ವಾಳ: ಬಿ.ಸಿ ರೋಡಿನಲ್ಲಿರುವ ಜವಳಿ  ಅಂಗಡಿಯೊಂದಕ್ಕೆ  ಬುರ್ಖಾ ಧರಿಸಿ ಮಾರುವೇಷದಲ್ಲಿ ಬಂದ ಪತ್ನಿ ಪತಿಯ ಮೇಲೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕೃಷ್ಣ ಕುಮಾರ್ ಸೋಮಯಾಜಿ ಅವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಇರಿದು ಪರಾರಿಯಾಗಿದ್ದಾರೆ. ಬಿ.ಸಿ ರೋಡಿನ ಸೋಮಯಾಜಿ ಜವಳಿ ಅಂಗಡಿಗೆ ನುಗ್ಗಿದ ಮಹಿಳೆ, ಕ್ಯಾಶ್ ಕೌಂಟರ್ ನಲ್ಲಿ ಕುಳಿತಿದ್ದ ತನ್ನ ಗಂಡನಿಗೆ ಇರಿದಿದ್ದಾರೆ. ಆರೋಪಿ ಪತ್ನಿಯನ್ನು ಬಂಧಿಸಿದ ಬಂಟ್ವಾಳ ನಗರ ಪೊಲೀಸರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.

Post a Comment

0 Comments