ಪಾಟ್ನಾ: ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ನೇತೃತ್ವದ ನೂತನ ಸರಕಾರ ನಾಳೆ (ಗುರುವಾರ) ಅಧಿಕಾರಕ್ಕೆ ಬರಲಿದೆ. ನಾಳೆ ಮಧ್ಯಾಹ್ನ ನೂತನ ಮುಖ್ಯಮಂತ್ರಿ, ಸಚಿವರುಗಳು ಪ್ರತಿಜ್ಞಾ ಸ್ವೀಕಾರ ನಡೆಸಲಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ.
ಇಂದು ಎನ್.ಡಿ.ಎ.ಶಾಸಕರುಗಳ ಸಭೆ ನಡೆದಿದ್ದು ಶಾಸಕಾಂಗ ಪಕ್ಷದ ನಾಯಕನನ್ನಾಗಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಅನಂತರ ಎನ್.ಡಿ.ಎ. ಮೈತ್ರಿಕೂಟ ಪಕ್ಷಗಳ ಸಭೆ ನಡೆಯಲಿದ್ದು ಅಲ್ಲಿಯೂ ಸಹ ನಾಯಕನನ್ನಾಗಿ ನಿತೀಶ್ ಕುಮಾರ್ ಅವರನ್ನು ಆರಿಸಲಾಗಿದೆ. ಅನಂತರ ನಿತೀಶ್ ಕುಮಾರ್ ಈಗಿನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದು ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರು ಸರಕಾರವನ್ನು ವಿಸರ್ಜಿಸುವರು. ನಾಳೆ ನೂತನ ಸರಕಾರ ಅಧಿಕಾರ ವಹಿಸಲಿದೆ.

0 Comments