Ticker

6/recent/ticker-posts

Ad Code

ಬಿಹಾರದಲ್ಲಿ 10 ನೇ ಬಾರಿ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅಧಿಕಾರ ಸ್ವೀಕಾರ


 ಪಾಟ್ನಾ:  10 ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಸರಕಾರ ಅಧಿಕಾರ ಸ್ವೀಕರಿಸಿದೆ. ಇಂದು (ಗುರುವಾರ) ಬೆಳಗ್ಗೆ ಪಾಟ್ನಾ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಪ್ರತಿಜ್ಣೆ  ಓದಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ಮುಖ್ಯಮಂತ್ರಿಗಳು, ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಿಜೆಪಿ ಮುಖಂಡರುಗಳಾದ ಸಾಮ್ರಾಟ್ ಚೌಧಿರಿ, ವಿಜಯ್ ಕುಮಾರ್ ಸಿನ್ಹ, ಜೆಡಿಯು ಮುಖಂಡರುಗಳಾದ ವಿಜಯ್ ಕುಮಾರ್ ಚೌಧಿರಿ, ಬಿಜೇಂದ್ರ ಪ್ರಸಾದ್ ಯಾದವ್, ಶ್ರಾವಣ್ ಕುಮಾರ್, ಬಿಜೆಪಿ ನೇತಾರರಾದ ಮಂಗಳ ಪಾಂಡೆ, ದಿಲೀಪ್ ಕುಮಾರ್ ಜಯ್ಸಾಳ್, ನಿತಿನ್ ನಬೀನ್ ಮೊದಲಾದವರು  ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

   243 ಸೀಟುಗಳುಳ್ಳ  ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ 89, ಜೆಡಿಯು 85 ಸಹಿತ ಎನ್.ಡಿ.ಎ.202 ಸೀಟುಗಳನ್ನು ಪಡೆದರೆ  ವಿಪಕ್ಷ ಆರ್.ಜೆ.ಡಿ. 25 ಸೀಟುಗಳನ್ನು ಪಡೆದಿತ್ತು.


Post a Comment

0 Comments