ಬದಿಯಡ್ಕ: ಎನ್.ಡಿ.ಪಿ.ಎಸ್ ಆಕ್ಟ್ ಪ್ರಕಾರ ನೆಲ್ಲಿಕಟ್ಟೆ ಸಾಲತ್ತಡ್ಕ ನಿವಾಸಿ ಪಿ.ಎಂ.ಇಕ್ಬಾಲ್ ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತ ಹಲವು ಮಾದಕವಸ್ತು ಸಾಗಾಟ ಪ್ರಕರಣಗಳಲ್ಲಿ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು, ಬದಿಯಡ್ಕ ಅಲ್ಲದೆ ಕರ್ಣಾಟಕ ರಾಜ್ಯದ ವಿವಿಧ ಠಾಣೆಗಳಲ್ಲಿ ಈತನ ಹೆಸರಿನಲ್ಲಿ ಕೇಸುಗಳಿವೆ. ಕಾವೂರು ಠಾಣಾ ವ್ಯಾಪ್ತಿಯಲ್ಲಿ 41.140 ಕಿಲೊ ಗಾಂಜ, ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ 26.1 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಇದೀಗ ಕೂಡ್ಲು ಅಜಾದ್ ನಗರದಲ್ಲಿ ವಾಸಿಸುತ್ತಿದ್ದಾನೆ. ಎನ್.ಡಿ.ಪಿ.ಎಸ್.ಆಕ್ಟ್ ಪ್ರಕಾರಣ ಈ ವರೆಗೆ ಜಿಲ್ಲೆಯಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಇಕ್ಬಾಲ್ ನನ್ನು ಪೂಜಾಪುರ ಜೈಲಿಗೆ ತಳ್ಳಲಾಗಿದೆ

0 Comments