ಕುಂಬಳೆ: ಇಲ್ಲಿನ ವಸತಿ ಗೃಹದಲ್ಲಿ ಮಾದಕವಸ್ತು ಸೇವಿಸುತ್ತಿದ್ದ 3 ಮಂದಿಯನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕುಂಬಳೆ ನಿತ್ಯಾನಂದ ಮಠ ಬಳಿಯ ಸಿ.ಕೆ.ಕೇತನ್, ಕುಂಟಂಗೇರಡ್ಕ ನಿವಾಸಿ ಅಬ್ದುಲ್ ನಿಸಾರ್, ಪುತ್ತೂರು ಗಾಳಿಮುಖ ನಿವಾಸಿ ಬ್ರಿಜೇಶ್ ಬಂಧಿತರು. ಕುಂಬಳೆ ಎಕ್ಸೈಸ್ ಇನ್ಸ್ಪೆಕ್ಟರ್ ಕೆ.ವಿ.ಶ್ರಾವಣ್ ಹಾಗೂ ತಂಡ ನಿನ್ನೆ (ಬುದವಾರ) ರಾತ್ರಿ 10 ಗಂಟೆಗೆ ಕಾರ್ಯಾಚರಣೆ ನಡೆಸಿದೆ. ಕುಂಬಳೆ ರೈಲು ನಿಲ್ದಾಣದಿಂದ ಆರೋಗ್ಯ ಕೇಂದ್ರಕ್ಕೆ ಸಾಗುವ ರಸ್ತೆ ಬದಿಯ ರಾಕೇಶ್ ಕಾಂಪ್ಲೆಕ್ಸ್ ಎಂಬ ಕಟ್ಟಡದಲ್ಲಿ ಮಾದಕವಸ್ತು ಸೇವಿಸುತ್ತಿದ್ದಾಗ ದಾಳಿ ನಡೆದಿದೆ. ಇವರು ಪ್ರಯಾಣಿಸಲು ಬಳಸಿದ್ದ ಸ್ಕೂಟರಿನಿಂದ 2772 ಗ್ರಾಂ ಮೆಥಾಫಿಟಮಿನ್ ವಶಪಡಿಸಲಾಗಿದೆ.

0 Comments