ಕಾಞಂಗಾಡ್: ಮಾದಕವಸ್ತು ಮಾತ್ರೆಗಳ ಸಹಿತ ಓರ್ವನನ್ನು ಹೊಸದುರ್ಗ ಎಕ್ಸ್ಪ್ರೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪುದಿಯಂಗಡಿ ನಿವಾಸಿ ಪಿ.ಪಿರೋಜ್(34) ಬಂಧಿತ ಆರೋಪಿ. ಹೊಸದುರ್ಗ ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಇ.ವಿ.ಜಿಷ್ಣು ಕುಮಾರ್ ಹಾಗೂ ತಂಡವು ನಿನ್ನೆ (ಮಂಗಳವಾರ) ಸಂಜೆ ಕಿಯಕುಂಕರೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಕೈಯಿಂದ 7.965 ಗ್ರಾಂ ಟ್ರಾಮಾಡೋಲ್ ಮಾತ್ರೆಗಳು, 22/296 ಗ್ರಾಂ ನಿಟ್ರಾಸೇಪಂ ಮಾತ್ರೆಗಳನ್ನು ವಶಪಡಿಸಲಾಗಿದೆ. ಬಂಧಿತ ಆರೋಪಿ ಹಲವು ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದು ಹಲವು ಸಲ ಜೈಲು ಸೇರಿದ್ದನೆಂದು ಎಕ್ಸ್ಪ್ರೆಸ್ ಅಧಿಕಾರಿಗಳು ತಿಳಿಸಿದ್ದಾರೆ.

0 Comments