ಪೆರ್ಲ : ತ್ರಿಸ್ತರ ಪಂಚಾಯತ್ ಚುನಾವಣೆಯ ನಾಮಪತ್ರಿಕೆ ಸಲ್ಲಿಕೆಯ ದಿನಾಂಕ ಘೋಷಿಸಿದ್ದರೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ತೀವ್ರಗತಿಯಲ್ಲಿದ್ದು ಎಣ್ಮಕಜೆ ಪಂಚಾಯತಿನಲ್ಲಿ ಎಡರಂಗದಿಂದ ಪ್ರಥಮ ನಾಮ ಪತ್ರಿಕೆ ಸಲ್ಲಿಕೆಯಾಗಿದೆ. 15ನೇ ಶೇಣಿ ವಾರ್ಡ್ ಎಡರಂಗ ವೈಲೆಟ್ ಡಾಲಿ ಡಿಸೋಜ ಪ್ರಥಮ ನಾಮ ಪತ್ರಿಕೆ ಸಲ್ಲಿಸಿದ ಅಭ್ಯರ್ಥಿಯಾಗಿದ್ದಾರೆ. ಮಂಗಳವಾರ ಪೂರ್ವಹ್ನ ವೇಳೆ
ಐಕ್ಯರಂಗದ ಮೊದಲ ನಾಮಪತ್ರಿಕೆಯಾಗಿ ನ್ಯಾಯವಾದಿ ಪ್ರತೀಕ್ಷಾ ಪೂಜಾರಿ ನಾಮಪತ್ರಿಕೆ ಸಲ್ಲಿಸಿದರು. ಮಧ್ಯಾಹ್ನ ಬಳಿಕ ಐಕ್ಯರಂಗದ ಐತ್ತಪ್ಪ ಕುಲಾಲ್, ಜಯಶ್ರೀ ಎ.ಕುಲಾಲ್ ಬೆಂಬಲಿಗರೊಡನೆ ಆಗಮಿಸಿ ನಾಮ ಪತ್ರಿಕೆ ಸಲ್ಲಿಸಿದರು.
ಎಣ್ಮಕಜೆ ಪಂಚಾಯತಿನಲ್ಲಿ ಹದಿನೆಂಟು ವಾರ್ಡ್ ಗಳಿದ್ದು ಈಗಾಗಲೇ ಎಡರಂಗ ಮಾತ್ರ ತಮ್ಮ ಪಕ್ಷದ ಅಭ್ಯರ್ಥಿಗಳ ಸಾರ್ವತ್ರಿಕ ಘೋಷಣೆ ನಡೆಸಿದೆ. ಆದರೆ ಉಳಿದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಐಕ್ಯರಂಗ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದರೂ ಸಾರ್ವಜನಿಕ ಘೋಷಣೆ ನಡೆಸದೆ ಕುತೂಹಲ ಉಳಿಸಿಕೊಂಡಿದೆ.

0 Comments