ಕಾಸರಗೋಡು: ಸ್ಕೂಟರಿನಲ್ಲಿ ಸಾಗಿಸುತ್ತಿದ್ದ 3.29 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದಲ್ಲಿ ಆರೋಪಿಗೆ ಎರಡು ವರ್ಷ ಕಠಿಣ ಸಜೆ, 20 ಸಾವಿರ ರೂ ದಂಡ ವಿಧಿಸಲಾಗಿದೆ. ಚೆರ್ವತ್ತೂರು ಮೈಲಾಟ್ಟಿ ಕುನ್ನು ನಿವಾಸಿ ಎಂ.ಕೆ.ಮುಹಮ್ಮದ್ ನಿಯಾಸ್(34) ಗೆ ಕಾಸರಗೋಡು ನ್ಯಾಯಾಲಯ ಈ ಶಿಕ್ಷೆ ನೀಡಿದೆ. ದಂಡ ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕು.
2021 ಡಿಸೆಂಬರ್ 24 ರಂದು ಮದ್ಯಾಹ್ನ 2.30 ಕ್ಕೆ ಚೆರ್ವತ್ತೂರು ಕೈದಕ್ಕಾಡ್ ಎಂಬಲ್ಲಿ ಎಕ್ಸೈಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಂ ಡಿ ಎಂ ಎ ವಶಪಡಿಸಲಾಗಿತ್ತು. ನೀಲೇಶ್ವರ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಕೆ.ಆರ್.ಕಲೇಶ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

0 Comments