ನಾರಂಪಾಡಿ : ಶ್ರೀ ಉಮಾಮಹೇಶ್ವರ ಕ್ಷೇತ್ರ ನಾರಂಪಾಡಿಯ ವಾರ್ಷಿಕ ಉತ್ಸವವು ಫೆ.4 ಬುಧವಾರ ಧ್ವಜಾರೋಹಣದಿಂದ ಮೊದಲ್ಗೊಂಡು ಫೆ. 7 ಬೆಡಿ, ಫೆ.8 ಆರಾಟು ಹಾಗೂ ಫೆ.9 ಧೂಮಾವತಿ ದೈವದ ಕೋಲದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದ್ದು ಉತ್ಸವದ ಯಶಸ್ವಿಗಾಗಿ ಸಮಿತಿಯೊಂದನ್ನು ರಚಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಮಾಸ್ಟರ್ ನಾರಂಪಾಡಿ, ಉಪಾಧ್ಯಕ್ಷರಾಗಿ ಸೀತಾರಾಮ ರಾವ್ ಪಿಲಿಕೂಡ್ಲು, ಪದ್ಮನಾಭ ಮಣಿಯಾಣಿ ನಾರಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಹರಿನಾರಾಯಣ ಶಿರಂತಡ್ಕ, ಕಾರ್ಯದರ್ಶಿಗಳಾಗಿ ಹರೀಶ ನಾರಂಪಾಡಿ, ದೇವರಾಜ ಭಂಡಾರಿ, ಖಜಾಂಜಿಯಾಗಿ ಕೃಷ್ಣಮೂರ್ತಿ ಎಡೆಪ್ಪಾಡಿ, ವಿವಿಧ ಉಪಸಮಿತಿಗಳ ಸಂಚಾಲಕರಾಗಿ ವೆಂಕಟರಮಣ ಭಟ್ ಉಪ್ಪಂಗಳ, ಪದ್ಮನಾಭ ಭಟ್ ಕೊರೆಕ್ಕಾನ, ಸುಬ್ರಹ್ಮಣ್ಯ ಭಟ್ ತಲೇಕ, ಕೊಟ್ಟ ಬೆಳ್ಚಪ್ಪಾಡ, ಸತೀಶ್ ರೈ ನಾರಂಪಾಡಿ, ಕಲಾವತಿ ಟೀಚರ್, ಸರೋಜಿನಿ ಮವ್ವಾರ್, ಪ್ರಮೋದ್ ಮುಂಡೊಳುಮೂಲೆ, ರಾಧಾಕೃಷ್ಣ ರೈ ಮುಂಡಾಸು, ಶ್ಯಾಮಪ್ರಸಾದ್ ಕಬೆಕ್ಕೋಡು, ಪರಮೇಶ್ವರ ನಾಯ್ಕ ಪಿಲಿಕೂಡ್ಲು, ಡಾ .ಕೇಶವ ಮವ್ವಾರ್ ಮತ್ತು ಶ್ರೀ ಸೀತಾರಾಮ ಕುಂಜತ್ತಾಯ ಇವರನ್ನು ಆರಿಸಲಾಯಿತು. ಬಾಲಕೃಷ್ಣ ಮಾಸ್ಟರ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಹರಿನಾರಾಯಣ ಶಿರಂತಡ್ಕ ಸ್ವಾಗತಿಸಿ, ಕೃಷ್ಣಮೂರ್ತಿ ಎಡೆಪ್ಪಾಡಿ ವಂದಿಸಿದರು. ಹರೀಶ್ ನಾರಂಪಾಡಿ ನಿರೂಪಿಸಿದರು.

0 Comments