ಪತ್ತನಂತಿಟ್ಟ : ಶಬರಿಮಲೆ ದರುಶನದ ನಡುವೆ ಮಹಿಳೆಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕೊಯಿಲಾಂಡಿ ಮೂಲದ ಸತಿ (68) ಅಪ್ಪಚಿಮೇಡು ಎಂಬಲ್ಲಿ ಪರ್ವತ ಹತ್ತುವ ನಡುವೆ ಕುಸಿದು ಬಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಾಣ ಉಳಿಸಲಾಗಲಿಲ್ಲ. ಸತಿ ತನ್ನ ಪತಿ ಮತ್ತು ಸಂಬಂಧಿಕರೊಂದಿಗೆ ದರುಶನಕ್ಕೆ ಬಂದಿದ್ದರು ಎನ್ನಲಾಗಿದೆ.

0 Comments