Ticker

6/recent/ticker-posts

Ad Code

ಧ.ಗ್ರಾ.ಯೋಜನೆಯ ಕಾಸರಗೋಡು ಕಾರ್ಯಕ್ಷೇತ್ರದ ಪದಾಧಿಕಾರಿಗಳ ತರಬೇತಿ


ಕಾಸರಗೋಡು ; ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಕಾಸರಗೋಡು ಕಾರ್ಯಕ್ಷೇತ್ರಗಳ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಕೂಡ್ಲು ವನಿತಾ ಭವನದಲ್ಲಿ ನಡೆಯಿತು. ಸಭೆಯಲ್ಲಿ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಜ್ಞಾನೇಶ್ವರ ಆಚಾರ್ಯ, ತಾಲೂಕಿನ ಯೋಜನಾಧಿಕಾರಿ  ದಿನೇಶ್,ಆಂತರಿಕ ಲೆಕ್ಕ ಪರಿಶೋಧಕರಾದ ಮೋನಪ್ಪ, ಕಾರಡ್ಕವಲಯದ ಮೇಲ್ವಿಚಾರಕರಾದ ಸುರೇಶ್ ಕಾಸರಗೋಡು, ವಲಯದ ಮೇಲ್ವಿಚಾರಕರಾದ ಗೋಪಾಲಕೃಷ್ಣ ಹಾಗೂ 8 ಕಾರ್ಯಕ್ಷೇತ್ರದ ಅಧ್ಯಕ್ಷರು ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾ ರ್ಯಕ್ರಮವನ್ನು ಕೂಡ್ಲು ಒಕ್ಕೂಟದ ಅಧ್ಯಕ್ಷರಾದ ಪ್ರಮೀಳಾರವರು ಉದ್ಘಾಟಿಸಿದರು. ಲೆಕ್ಕಪರಿಶೋಧಕರದ ಮೋನಪ್ಪ ರವರು ಮಾತನಾಡುತ್ತ ಒಕ್ಕೂಟ ಎಂದರೆ ಏನು ಒಕ್ಕೂಟದಲ್ಲಿ ಪದಾಧಿಕಾರಿಗಳ ಜವಾಬ್ದಾರಿ ಏನು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರಡ್ಕ ವಲಯದ ಮೇಲ್ವಿಚಾರಕರು ಯೋಜನೆಯಲ್ಲಿ ದೊರಕುವಂತ ವಿಮೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಯೋಜನಾಧಿಕಾರಿ ದಿನೇಶ್ ಅವರು ಮಾತನಾಡುತ್ತ ಪ್ರಗತಿ ನಿಧಿ ಬೇಡಿಕೆ ಸಲ್ಲಿಸುವ ಆ್ಯಪ್ ನ ಬಗ್ಗೆ, ಕ್ಷೇತ್ರದ ಹಿನ್ನೆಲೆಯ ಬಗ್ಗೆ ಮತ್ತು ಇತರ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಜ್ಞಾನೇಶ್ವರ್ ಅವರು ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು. ಅಡ್ಕತ್ ಬೈಲು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶೋಭಾ  ನಿರೂಪಿಸಿದರು. ಉಳಿಯತಡ್ಕ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಜ್ಯೋತಿಯವರು ಸ್ವಾಗತಿಸಿ ಏರಿಯಾಲ್ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ನಮಿತಾ ವಂದಿಸಿದರು.


Post a Comment

0 Comments