Ticker

6/recent/ticker-posts

Ad Code

ಅಂಗಡಿಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ - ವೃದ್ಧನ ಬಂಧನ

 


ಬದಿಯಡ್ಕ : ಅಂಗಡಿ ಸಾಮಾಗ್ರಿಗಳನ್ನು ಖರೀದಿಸಲು ಬಂದ ಹತ್ತು ವರ್ಷ ಪ್ರಾಯದ  ಶಾಲಾ ವಿದ್ಯಾರ್ಥಿನಿಯೋರ್ವಳನ್ನು ಅಂಗಡಿ  ಮಾಲಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕುಂಬ್ಡಾಜೆ ತುಪ್ಪೆಕಲ್ಲಿನ ಅಬ್ದುಲ್ಲ (64) ಎಂಬಾತನನ್ನು ಬಂಧಿಸಲಾಗಿದೆ. ಕಳೆದ ದಿನ ಈ ಘಟನೆ ನಡೆದಿದ್ದು ಶಾಲೆ ಬಿಟ್ಟು ಮನೆಗೆ ಮರಳುವ ನಡುವೆ ವಿದ್ಯಾರ್ಥಿನಿ ಅಂಗಡಿಗೆ ತೆರಳಿದ್ದು ಈ ವೇಳೆ ಅಬ್ದುಲ್ಲ ಪೀಡಿಸಲು ಯತ್ನಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬಾಲಕಿ ಮನೆಗೆ ತಲುಪಿ ವಿವರ ತಿಳಿಸಿದ್ದು ಬಳಿಕ ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಿಐ ಎ ಸಂತೋಷ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

Post a Comment

0 Comments