ಕುಂಬಳೆ : ರಾ. ಹೆದ್ದಾರಿಯ ಕುಂಬಳೆಯಲ್ಲಿ ನೂತನವಾಗಿ ಸ್ಥಾಪಿಸಿದ ಟೋಲ್ ಫ್ಲಾಝಾದಲ್ಲಿ ಇಂದು (ನ. 12) ಬೆಳಗ್ಗಿನಿಂದಲೇ ಟೋಲ್ ಶುಲ್ಕ ಆರಂಭಿಸುವುದಾಗಿ ನಿಗದಿತ ದರ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳವಾರ ಕುಂಬಳೆಯ ಟೋಲ್ ವಿರೋಧಿ ಕ್ರಿಯಾ ಸಮಿತಿ ತುರ್ತು ಸಭೆ ಸೇರಿ ಜಿಲ್ಲಾಧಿಕಾರಿಗಳ ಸಮ್ಮುಖ ಸಭೆ ನಡೆಸಿದ್ದು ಅದನ್ನು ತಡೆಯುವುದಾಗಿ ಸಭೆಯಲ್ಲಿ ಜಿಲ್ಲಾಧಿಕಾರಿ ಭರವಸೆ ಇತ್ತಿದ್ದಾರೆಂದು ಸಮಿತಿ ಸಂಚಾಲಕ ಶಾಸಕ ಎ. ಕೆ. ಎಂ. ಅಶ್ರಫ್ ತಿಳಿಸಿದ್ದರು.
ಕುಂಬಳೆಯ ಟೋಲ್ ಪ್ಲಾಝಾ ಹೆದ್ದಾರಿ ಇಲಾಖೆಯ ಕಾನೂನು ಉಲ್ಲಂಘನೆಯಾಗಿದ್ದು, ತಲಪಾಡಿ ಟೋಲ್ ಗೇಟಿನಿಂದ ಕೇವಲ 23 ಕೀ. ಮೀ ದೂರದಲ್ಲಿ ಇರುವುದರಿಂದ ಕ್ರಿಯಾ ಸಮಿತಿ ಹೋರಾಟದ ಮೂಲಕ ರಂಗಕ್ಕಿಳಿದಿತ್ತು. ಇದೀಗ ಇಂದು ಬೆಳಗ್ಗೆ 8 ಗಂಟೆಗೂ ಟೋಲ್ ಬೂತ್ ಸಮೀಪ ಹಾಜರಿದ್ದ ಕ್ರಿಯಾ ಸಮಿತಿಯವರು ಎಲ್ಲಿಯಾದರೂ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘನೆ ಮಾಡಿದರೆ ತೀವ್ರ ಹೋರಾಟ ನಡೆಸುವುದಾಗಿ ಸ್ಥಳದಲ್ಲಿ ಸಜ್ಜಾಗಿದ್ದರು. ಆದರೆ ಟೋಲ್ ಪ್ಲಾಜಾದವರು ನಿಯಮಿಸಿದ ಉದ್ಯೋಗಿಗಳು ಸ್ಥಳಕ್ಕೆ ಬಂದಿದ್ದರೂ ಕರ್ತವ್ಯ ನಿರ್ವಹಿಸಲಿಲ್ಲ. ಟೋಲ್ ಸಿಬ್ಬಂದಿಗಳು ಹಿಂತಿರುಗಿದ ಬಳಿಕ ಕ್ರಿಯಾ ಸಮಿತಿಯವರು ತೆರಳಿದರು. ಟೋಲ್ ಶುಲ್ಕ ವಸೂಲಿ ಆರಂಭಗೊಂಡರೆ ಜನತೆಯ ಹೋರಾಟ ನಡೆಯುವುದು ನಿಶ್ಚಿತ ಎಂದು ಕುಂಬಳೆ ಟೋಲ್ ವಿರೋಧಿ ಕ್ರಿಯಾ ಸಮಿತಿ ತಿಳಿಸಿದೆ.

0 Comments