ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಿಗೆ ಮತದಾನದ ನಡೆಯುವ ದಿನ ಸಾರ್ವತ್ರಿಕ ರಜಾದಿನ ಘೋಷಿಸಲು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಿದೆ. ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಲು ಡಿಸೆಂಬರ್ 9 ಮತ್ತು 11 ರಂದು ಆಯಾ ಜಿಲ್ಲೆಗಳಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರಿಮೆಂಟ್ಸ್ ಕಾಯ್ದೆಯಡಿ ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿನ ಕಾರ್ಖಾನೆ, ತೋಟ ಮತ್ತು ಇತರ ವರ್ಗದ ಉದ್ಯೋಗಿಗಳಿಗೆ ಸಾರ್ವಜನಿಕ ರಜಾದಿನಗಳನ್ನು ಒದಗಿಸಲು ಅಥವಾ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸೌಲಭ್ಯಗಳನ್ನು ಒದಗಿಸಬೇಕು. ಈ ಸಂಬಂಧ ಉದ್ಯೋಗದಾತರಿಗೆ ಸೂಚಿಸಬೇಕೆಂದು ಚುನಾವಣಾ ಆಯೋಗವು ಕೇರಳ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಕೇಂದ್ರ ಸರಕಾರ ಇಲಾಖೆಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳಿಗೆ ಮತದಾನದ ದಿನಗಳಲ್ಲಿ ರಜೆ ನೀಡುವಂತೆ ಆಯೋಗವು ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆಯನ್ನು ಕೋರಿದೆ.

0 Comments