ಮಾಟ ಮಂತ್ರಕ್ಕೀಡಾದ ಯುವತಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪತಿ, ಮಾವ, ಮಂತ್ತವಾದಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪತ್ತನಂತಿಟ್ಟ ನಿವಾಸಿ ಶಿವದಾಸ್ (ಮಂತ್ರವಾದಿ), ಯುವತಿಯ ಪತಿ ಅಖಿಲ್ ದಾಸ್, ಮಾವ ದಾಸ್ ಬಂಧಿತರು. ಕೊಟ್ಡಯಂ ಮಣ್ಣಾರ್ಕಾಡ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತ ಅಖಿಲ್ ದಾಸ್ ಹಾಗೂ ದೂರುದಾರೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಪತಿಯ ಮನೆಯಲ್ಲಿ ವಾಸಿಸುತ್ತಿದ್ದರು. ಯುವತಿಯ ಶರೀರದಲ್ಲಿ ಕೆಲವು ದುಷ್ಟ ಶಕ್ತಿಗಳು ಪ್ರವೇಶಿಸಿವೆ ಎಂಬ ಕಾರಣ ಹೇಳಿ ಮಂತ್ರವಾದಿಯನ್ನು ಬರಮಾಡಲಾಯಿತು. ನವಂಬರ್ 2 ರಂದು ಇದಕ್ಕೆ ಸಂಬಂಧಿಸಿದ ಮಂತ್ರವಾದ ಚಟುವಟಿಕೆ ಮನೆಯಲ್ಲಿ ನಡೆಯಿತು. ಈ ವೇಳೆ ಯುವತಿಗೆ ಬಲವಂತವಾಗಿ ಮದ್ಯ ನೀಡಲಾಯಿತು. ಅನಂತರ ಮಂತ್ರವಾದಿ ಅತ್ಯಾಚಾರ ನಡೆಸಿದ್ದು ಇದಕ್ಕೆ ಪತಿ, ಮಾವ ಸಹಾಯ ಮಾಡಿದ್ದರೆಂದು ಆರೋಪಿಸಲಾಗಿದ್ದು ಅದರಂತೆ ಬಂಧನ ನಡೆದಿದೆ

0 Comments