ತ್ರಿಶೂರು: ಅಂಗನವಾಡಿ ಶಿಕ್ಷಕಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ಇಬ್ಬರು ಇನ್ಸ್ಟಾಗ್ರಾಂ ಗೆಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ತ್ರಿಶೂರು ಮಾಳ ನಡುವೆ ನಿವಾಸಿ ಅಂಜನ(22), ಹಾಗೂ ಆಕೆಯ ಇಬ್ಬರು ಇನ್ಸ್ಟಾಗ್ರಾಂ ಗೆಳೆಯರನ್ನು ಬಂಧಿಸಲಾಗಿದೆ. ಅಂಗನವಾಡಿ ಶಿಕ್ಷಕಿ ಮೋಳಿ ಜಾರ್ಜ್ ಎಂಬವರ ಮಾಲೆ ಎಗರಿಸಿದ ಪ್ರಕರಣದಲ್ಲಿ ಆರೋಪಿಗಳ ಬಂಧನ ನಡೆದಿದೆ. ಬಂಧಿತ ಅಂಜನಳ ಪುತ್ರಿ ಮೋಳಿ ಜಾರ್ಜ್ ಶಿಕ್ಷಕಿಯಾಗಿರುವ ಅಂಗನವಾಡಿಯ ವಿದ್ಯಾರ್ಥಿನಿ. ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಶಿಕ್ಷಕಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನ ಎಗರಿಸಲಾಗಿತ್ತು. ಪತಿಯಿಂದ ದೂರವಾಗಿ ಮಗುವಿನ ಜತೆ ಬೇರೆಯೇ ಮನೆಯಲ್ಲಿ ವಾಸಿಸುವ ಅಂಜನ, ಐಷಾರಾಮಿ ಜೀವನ ನಡೆಸಲು ಕಳ್ಳತನ ಯೋಜನೆ ಹಾಕಿದ್ದಳು. ಅದಕ್ಕಾಗಿ ಮಗಳ ಶಿಕ್ಷಕಿಯ ಕತ್ತಿನಲ್ಲಿದ್ದ ಸರವನ್ನೇ ಎಗರಿಸಿದ್ದು ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ.

0 Comments