ಬದಿಯಡ್ಕ: ಸ್ಥಳೀಯಾಡಳಿತೆ ಚುನಾವಣೆ ಹಿನ್ನೆಲೆಯಲ್ಲಿ ಎಡರಂಗ ಬದಿಯಡ್ಕ ಪಂಚಾಯತು ಸಮಾವೇಶ ನಡೆಯಿತು. ಬದಿಯಡ್ಕದಲ್ಲಿ ನಡೆದ ಕಾರ್ಯಕ್ರಮವನ್ನು ಸಿಪಿಎಂ ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಸಿಜಿ ಮಾಥ್ಯು ಉದ್ಘಾಟಿಸಿದರು.
ಸಿಪಿಐ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಸುಧಾಕರ ವಿದ್ಯಾಗಿರಿ ಅಧ್ಯಕ್ಷತೆ ವಹಿಸಿದರು. ಅಡ್ವ.ಪ್ರಕಾಶ್ ಅಮ್ಮಣ್ಣಾಯ ಸ್ವಾಗತಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ರಾಜನ್, ಇತರರಾದ ಬಿ. ಶೋಭ, ಕೆ.ಶಾರದ, ಪಿ.ರಂಜಿತ್, ಎಂ.ಎಸ್.ಶ್ರೀಕಾಂತ್, ವಿ.ಎಂ.ಸುಬೈರ್, ಹಮೀದ್ ಮಾಸ್ತರ್ ಮಾತನಾಡಿದರು. ಎಡರಂಗದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಯಿತು.


0 Comments