ಪತಿ ಊರಿಗೆ ಬಂದು ಗಲ್ಫ್ ಗೆ ಹಿಂತಿರುಗಿದ ಮರುದಿನವೇ ಯುವತಿ ತನ್ನ ಲವರ್ ಜತೆ ಊರು ಬಿಟ್ಟ ಘಟನೆ ನಡೆದಿದೆ. ತಳಿಪರಂಬ ಪನ್ನಿಯೂರು ಬಳಿಯ ಕೆ.ನೀತು(35) ನಾಪತ್ತೆಯಾದ ಯುವತಿ. ಈಕೆ ಪತ್ನಿ ಹಾಗೂ ಎರಡು ಮಕ್ಕಳ ತಂದೆಯಾದ ಸುಮೇಶ್ ಎಂಬಾತನ ಜತೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀತುವಿನ ಪತಿ ಅಜೀಶ್ ದುಬೈ ಉದ್ಯೋಗಿಯಾಗಿದ್ದಾರೆ. ಇವರು ರಜೆಯಲ್ಲಿ ಊರಿಗೆ ಬಂದು ಎರಡು ದಿನಗಳ ಹಿಂದೆಯಷ್ಟೇ ಮರಳಿದ್ದರು. ನಿನ್ನೆ (ಶುಕ್ರವಾರ) ಬೆಳಗ್ಗೆ 9.30 ಕ್ಕೆ ನೀತು ನಾಪತ್ತೆಯಾಗಿದ್ದಳು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

0 Comments