ಕಾಸರಗೋಡು : ಕಾಸರಗೋಡು ಉಪಜಿಲ್ಲಾ ಕಲೋತ್ಸವದ ಎಲ್.ಪಿ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಶಾರ್ವಿ ವಳಕುಂಜ ತನ್ನ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾಳೆ. ಈಕೆ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಶಾಸ್ತ್ರೀಯ ಸಂಗೀತದಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಕನ್ನಡ ಭಾಷಣ ಹಾಗೂ ಸಂಘಗಾನ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದಿರುವಳು. ಕಲ್ಲಕಟ್ಟ ಯಂ ಎ ಯು ಪಿ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿಯಾದ ಈಕೆ ಸಂಗೀತಾಭ್ಯಾಸವನ್ನು ಸಾರಂಗ ಸಂಗೀತ ಶಾಲೆಯ ವಿದುಷಿ ಸರಸ್ವತಿ ಕೃಷ್ಣನ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಮಹೇಶ್ ವಳಕುಂಜ ಹಾಗೂ ಶಾಲಿನಿ ದಂಪತಿಯ ಪುತ್ರಿ.

0 Comments