Ticker

6/recent/ticker-posts

Ad Code

ಪೆರಡಾಲದಲ್ಲಿ ಜಗದೀಶ್ ಸಾಲಿಯಾನ್ ನಿಧನ


 ಬದಿಯಡ್ಕ: ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.‌ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಬಳಿಯ ದಿವಂಗತ ಕೃಷ್ಣ ಎಂಬವರ ಪುತ್ರ ಜಗದೀಶ ಸಾಲಿಯಾನ್(42) ಮೃತಪಟ್ಟ ವ್ಯಕ್ತಿ. ಪೆರಡಾಲ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾಗಿದ್ದ ಅವರು ಇದೀಗ ಕ್ಷೇತ್ರ ನವೀಕರಣ ಸಮಿತಿ ಉಪಾಧ್ಯಕ್ಷರಾಗಿದ್ದರು. ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ನಿನ್ನೆ (ಮಂಗಳವಾರ) ಹೃದಯಾಘಾತ ಉಂಟಾಗಿದೆ. ಮೃತರು ತಾಯಿ ಸುಂದರಿ, ಸಹೋದರ ಸಹೋದರಿಯರಾದ ಯೋಗೀಶ್ ಸಾಲಿಯಾನ್, ರವಿಕುಮಾರ್, ಚಂದ್ರಕಲ ಎಂಬಿವರನ್ನು ಅಗಲಿದ್ದಾರೆ

Post a Comment

0 Comments