Ticker

6/recent/ticker-posts

Ad Code

ಕುಂಬಳೆ ಗ್ರಾಮ‌ ಪಂಚಾಯತು ಯು.ಡಿ.ಎಫ್ ಆಡಳಿತ ವಿಫಲ- ಎಡರಂಗದಿಂದ ಗಂಭೀರ ಆರೋಪ


 ಕುಂಬಳೆ:  ಕಳೆದ ಐದು ದಶಕಗಳಿಂದ ಪಂಚಾಯತ್ ಅನ್ನು ಆಳುತ್ತಿರುವ ಯುಡಿಎಫ್ ಆಡಳಿತ ಸಮಿತಿಯು ಕುಂಬಳೆಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಅವಗಣಿಸಿದ್ದು, ಅಭಿವೃದ್ಧಿಯಿಲ್ಲದೆ ಕೇರಳದಲ್ಲಿ ಹಿಂದುಳಿದ ಪಂಚಾಯತ್ ಆಗಿ ಪರಿವರ್ತಿಸಿದೆ ಎಂದು ಎಲ್‌ಡಿಎಫ್ ಪಂಚಾಯತ್ ಸಮಿತಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಯುಡಿಎಫ್‌ನ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷ ಬಿಜೆಪಿ ಮೌನವಾಗಿದೆ.ಬಸ್ ನಿಲ್ದಾಣ, ರಸ್ತೆಬದಿಯ ವಿಶ್ರಾಂತಿ ಕೇಂದ್ರ ಮತ್ತು ಮರಳು ಮಾರಾಟ ಭ್ರಷ್ಟಾಚಾರದಿಂದ ಆಡಳಿತ ಸಮಿತಿ ಮುಜುಗರಕ್ಕೊಳಗಾಗಿದೆ.ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ನ್ನು ಕೆಡವಲಾಗಿದ್ದರೂ ಹೊಸ ಸಂಕೀರ್ಣವನ್ನು ನಿರ್ಮಿಸಲು ಸಾಧ್ಯವಾಗಿಲ್ಲ.ಇತ್ತೀಚೆಗೆ ಜಾರಿಗೆ ತರಲಾದ ಸಂಚಾರ ಸುಧಾರಣೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ.

ಭ್ರಷ್ಟಾಚಾರದಲ್ಲಿ ವಿಶ್ವ ದಾಖಲೆಯನ್ನು ಹೊಂದಿರುವ ಕುಂಬಳೆ ಪಂಚಾಯತ್‌ನ ಜನರಿಗೆ ಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಯುಡಿಎಫ್ ಆಡಳಿತ ಸಮಿತಿ ಸಂಪೂರ್ಣ ವಿಫಲವಾಗಿದೆ ಎಂದು ನಾಯಕರು ಆರೋಪಿಸಿದರು.

ಎಡರಂಗ ಸರ್ಕಾರದ ಜನಪರ ಯೋಜನೆಗಳ ಆಧಾರದ ಮೇಲೆ ಕೇರಳದಲ್ಲಿ ನಡೆಯುವ ತ್ರಿಸ್ಥರ ಹಂತದ ಪಂಚಾಯತ್ ಚುನಾವಣೆಯಲ್ಲಿ ಎಲ್‌ಡಿಎಫ್ ದೊಡ್ಡ ಗೆಲುವು ಸಾಧಿಸುತ್ತದೆ.

ಕುಂಬಳೆಯಲ್ಲಿ ಯುಡಿಎಫ್ ಆಡಳಿತ ಸಮಿತಿಯ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಬಹಿರಂಗಪಡಿಸುವ ಮೂಲಕ ಸ್ಪರ್ಧಿಸುತ್ತಿರುವ ಚುನಾವಣೆಯಲ್ಲಿ ಎಲ್‌ಡಿಎಫ್ ದೊಡ್ಡ ಗೆಲುವು ಸಾಧಿಸಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಸಿಪಿಐಎಂ ಕುಂಬಳೆ ಪ್ರದೇಶ ಕಾರ್ಯದರ್ಶಿ ಸಿ.ಎ. ಸುಬೈರ್, ನೇತಾರರಾದ ಕೆ.ಬಿ. ಯೂಸುಫ್, ರತ್ನಾಕರ.ಜಿ, ಸಿದ್ದಿಕಾಲಿ ಮೊಗ್ರಾಲ್, ಅಹ್ಮದಾಲಿ ಕುಂಬಳೆ, ರಘುರಾಮ್ ಚತ್ರಂಪಳ್ಳ, ಮತ್ತು ತಾಜುದ್ದೀನ್ ಮೊಗ್ರಾಲ್ ಭಾಗವಹಿಸಿದ್ದರು.


ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ.


ಕುಂಬಳೆ ಪಂಚಾಯತ್‌ನಲ್ಲಿ, ಸಿಪಿಐ(ಎಂ) ಅಭ್ಯರ್ಥಿಗಳು ಇಪ್ಪತ್ತು ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದ್ದಾರೆ ಮತ್ತುನಾ ಲ್ಕು ವಾರ್ಡ್‌ಗಳಲ್ಲಿ ಎಲ್.ಡಿ.ಎಫ್ ಘಟಕ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.


ವಾರ್ಡ್ 3 ಕಕ್ಕಳಕುನ್ನು ಶಶಿಧರ ಪಡಿಕ್ಕಲ್, 4 ಬಂಬ್ರಾಣ ಮಹಮ್ಮದ್ ಇರ್ಫಾನ್, 5 ಉಜಾರ್ ಕೆ.ಕೆ.ಸುಮಾ, 6 ಉಳುವಾರ್ ಆಯಿಷತ್ ರಸೂಲ, 7 ಕಳತ್ತೂರು ಸುಕೇಶ್ ಭಂಡಾರಿ, 8 ಇಚ್ಲಂಪಾಡಿ ಅಬ್ದುಲ್ ನಾಸಿರ್, 10 ಮುಳಿಯಡ್ಕ ರಮೇಶ್.ಪಿ,

12 ನಾರಾಯಣಮಂಗಲ ಅನಿತಾ ಪಿ ನಾಯರ್, 16 ಕೊಪ್ಪಳ ರಿಜಾನಾ ನಿಯಾಸ್, 17 ಕೊಯಿಪ್ಪಾಡಿ ಅಬ್ದುಲ್ ಸಲೀಂ, 20 ಬದ್ರಿಯಾನಗರ ಅಬ್ದುಲ್ ರಿಯಾಸ್, 22 ಮಾಟಂಗುಳಿ ಸಲ್ಫತ್, 23 ಕೋಟೆಕ್ಕಾರ್ ಮನೋಜ್ ಕುಮಾರ್ ಸಿ, ಮತ್ತು 24 ಶಾದೀಕಾ ಸತೀಶ್ ಕುಮಾರ್ ಮೊದಲ ಹಂತದ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಕಾಸರಗೋಡು ಬ್ಲಾಕ್ ಪಂಚಾಯತ್ ನ ಮೊಗ್ರಾಲ್ ವಿಭಾಗದಿಂದ ಸಿಪಿಐ(ಎಂ)ನ ಅನಿಲ್ ಕುಮಾರ್ ಎಸ್ ಹಾಗೂ . ಜಿಲ್ಲಾ ಪಂಚಾಯಿತು ಕುಂಬಳೆ ವಿಭಾಗದಿಂದ ಸಿಪಿಎಂನ ಕೆ.ಬಿ.ಯೂಸುಫ್ ಸ್ಪರ್ಧಿಸಲಿದ್ದಾರೆ.

Post a Comment

0 Comments