Ticker

6/recent/ticker-posts

Ad Code

ಗುಡ್ಡದ ಮೇಲೆ ನಿಲ್ಲಿಸಿದ್ದ ಜೀಪು ಹಿಂದಕ್ಕೆ ಚಲಿಸಿ ತಾಯಿ ಮಗಳಿಗೆ ಗಂಭೀರ ಗಾಯ


ಉಪ್ಪಳ:  ಗುಡ್ಡದ ಮೇಲಿನ ರಸ್ತೆಯೊಂದರಲ್ಲಿ  ನಿಲ್ಲಿಸಿದ್ದ ಜೀಪೊಂದು ಹಿಂದಕ್ಕೆ ಉರುಳಿ ಸಂಭವಿಸಿದ ಅಪಘಾತದಲ್ಲಿ ತಾಯಿ ಮತ್ತು ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಬೇಕೂರಿನಲ್ಲಿ ನಡೆದಿದೆ.

 ಬೇಕೂರಿನ ದಿವಂಗತ ಮಹಾಬಲ ಭಂಡಾರಿ ಅವರ ಪತ್ನಿ ಜಯಂತಿ ಭಂಡಾರಿ (74) ಮತ್ತು ಅವರ ಪುತ್ರಿ ಸುಮಲತಾ ಶೆಟ್ಟಿ (47) ಗಾಯಗೊಂಡವರು.ಇಬ್ಬರನ್ನೂ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಂಗಳವಾರ ಸಂಜೆ ಈ ಅಪಘಾತ ಸಂಭವಿಸಿದೆ.

 ಗುಡ್ಡದ ಮೇಲೆ ನಿಲ್ಲಿಸಿದ್ದ ವಾಹನ ಹಿಂದಕ್ಕೆ ಚಲಿಸಿ, ತಮ್ಮ ಮನೆಯ ಅಂಗಳದಲ್ಲಿ ಒಣ ಅಡಿಕೆ ಸಂಗ್ರಹಿಸುತ್ತಿದ್ದ ತಾಯಿ ಮತ್ತು ಮಗಳಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದೆ, ಬಳಿಕ  ಮುಂದೆ ಸಾಗಿದ ಜೀಪು ತೋಟದೊಳಗೆ ಚಲಿಸಿ ಹೊಂಡಕ್ಕೆ  ಉರುಳಿತು. ಕೇರಳ ಕರುತೇಡಂ ಆಗ್ರೋ ಸೊಸೈಟಿಗೆ ಸೇರಿದ ವಾಹನ ಇದಾಗಿದೆ ಎಂದು ತಿಳಿದು ಬಂದಿದೆ.

Post a Comment

0 Comments