ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಚಾರಾರ್ಥವಾಗಿ ಬಳಸಿಕೊಳ್ಳಲು ಬ್ರಹ್ಮಕಲಶೋತ್ಸ ಸಮಿತಿ ಹಾಗೂ ಪ್ರಚಾರ ಸಮಿತಿಯ ನೇತೃತ್ವದಲ್ಲಿ ನಡೆಸಲಾದ ಲಾಂಛನ(ಲೋಗೋ) ರಚನಾ ಸ್ಪರ್ಧೆಯಲ್ಲಿ ಬದಿಯಡ್ಕದ ದೀಕ್ಷಿತ್ ಅವರ ರಚನೆಯು ಆಯ್ಕೆಯಾಗಿದೆ.
ಇವರು ಎಸ್ ಟಿ ಪ್ರೊಮೋಟರ್ ಆಗಿದ್ದು, ಕಳೆದ ಕೆಲವು ವರ್ಷಗಳಿಂದ ಸ್ಟಾಂಡ್ ಔಟ್ ಕ್ರಿಯೇಷನ್ಸ್ ಎಂಬ ಹೆಸರಿನಲ್ಲಿ ತಮ್ಮ ಹವ್ಯಾಸವನ್ನೂ ಮುಂದುವರಿಸುತ್ತಿದ್ದಾರೆ. ಸ್ಪರ್ಧೆಯ ತೀರ್ಪುಗಾರರಾಗಿ ಬಾಲಸುಬ್ರಮಣ್ಯ ಬೊಳುಂಬು, ರಾಜೇಶ್ ಬದಿಯಡ್ಕ ಹಾಗೂ ಶ್ಯಾಮ ಪ್ರಸಾದ್ ಸರಳಿ ಸಹಕರಿಸಿದರು.
ಸದ್ಯದಲ್ಲೇ ಲಾಂಛನ ಬಿಡುಗಡೆ ನಡೆಯಲಿದೆ. ಬಹುಮಾನಿತರಿಗೆ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಗಣ್ಯರಿಂದ ಸೂಕ್ತ ಗೌರವ, ಬಹುಮಾನವನ್ನು ನೀಡಲಾಗುವುದು. ಅಲ್ಲದೆ ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೂ ಪ್ರೋತ್ಸಾಹಕ ಪ್ರಮಾಣಪತ್ರ ನೀಡಲಾಗುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ನಿರಂಜನ್ ರೈ ಪೆರಡಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

0 Comments