Ticker

6/recent/ticker-posts

Ad Code

'ಲವ್ ಕೇಸ್'ಲ್ಲಿ ಒಂದಾದ ಕಾಸರಗೋಡಿನ ಯುವ ನಟ ರಂಜನ್ - ಮಹಾನಟಿ ವಂಶಿ


 ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ನಟಿಸಿದ್ದ ಪ್ರವೀಣ ಖ್ಯಾತಿಯ ರಂಜನ್‌ ಅವರು ನಟನಾಗಿ ಕಾಣಿಸಿಕೊಳ್ಳುವ ಚಿತ್ರವೊಂದಕ್ಕೆ ಮುಹೂರ್ತ ನಡೆದಿದೆ.  'ಲವ್ ಕೇಸ್' ಚಿತ್ರದ ಹೆಸರು.  ಮಹಾನಟಿ ಸೀಸನ್ 2ರಲ್ಲಿ ಭಾಗವಹಿಸಿದ್ದ ವಂಶಿ ಸದ್ಯ ಚಿತ್ರದಲ್ಲಿ ರಂಜನ್ ಜತೆ  ನಾಯಕಿಯಾಗಿ ನಟಿಸಲು ಸಜ್ಜಾಗಿದ್ದಾರೆ. ನಟಿ ವಂಶಿ ಮಹಾನಟಿ ಶೋ ಆರಂಭದಿಂದ ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿದ್ದರು. ಹೊಸ ಸಿನಿಮಾದಲ್ಲಿ ವಂಶಿಗೆ ಜೋಡಿಯಾಗಿ ರಂಜನ್  ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರ ಪ್ರೇಮ ಕಥೆಯನ್ನೊಳಗೊಂಡಿದೆ.  ಎಂ.ಬಿ ಕ್ರಿಯೇಷನ್ಸ್‌ ಬ್ಯಾನರ್ ಅಡಿಯಲ್ಲಿ ಮೋಹನ್ ಬಾಬು ನಿರ್ಮಾಣ ಹಾಗೂ ಜೈಶ್ ನಿರ್ದೇಶನದಲ್ಲಿ 'ಲವ್ ಕೇಸ್' ಸಿನಿಮಾದ ಚಿತ್ರೀಕರಣ ನಡೆಯಲಿದೆ.

Post a Comment

0 Comments