Ticker

6/recent/ticker-posts

Ad Code

ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿ‌ ಕುಸಿದು ಬಿದ್ದು ಮೃತ್ಯು


 ಕುಂಬಳೆ: ಕೇರಳ ಹಾಗೂ ಕರ್ಣಾಟಕ ರಾಜ್ಯಗಳ ವಿವಿದ ಪೊಲೀಸ್ ಠಾಣೆಗಳಲ್ಲಿ ಹಲವು ಕೇಸುಗಳನ್ನು ಹೊಂದಿರುವ ಕುಕ್ಕಾರಿನ ಟಿಕ್ಕಿ ಅಮ್ಮಿ ಯಾನೆ ಮುಹಮ ಅಮೀರ್ (38) ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ನಿನ್ನೆ (ಶುಕ್ರವಾರ) ಮದ್ಯಾಹ್ನ ಮನೆಯಲ್ಲಿ ಕುಸಿದು ಬಿದ್ದಿದ್ದು ಕೂಡಲೇ ಕುಂಬಳೆ ಆಸ್ಪತ್ರೆಗೂ ಅನಂತರ ಮಂಗಳೂರು ಆಸ್ಪತ್ರೆಗೂ ದಾಖಲಿಸಲಾಯಿತು.‌ ಸಾಯಂಕಾಲದ  ವೇಳೆ ಕೊನೆಯುಸಿರೆಳೆದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳವು, ಮನೆಗೆ ದಾಳಿ, ಅಪಹರಣ, ಕೋವಿ ತೋರಿಸಿ ಹಣ ದರೋಡೆ, ಮಾದಕವಸ್ತು ಸಾಗಾಟ, ಹತ್ಯಾ ಯತ್ನ ಸಹಿತ  ಕುಂಬಳೆ ಪೊಲೀಸ್ ಠಾಣೆಯಲ್ಲಿ 10, ಮಂಜೇಶ್ವರದಲ್ಲಿ 4, ಕಾಸರಗೋಡು ಠಾಣೆಯಲ್ಲಿ 2 ಕೇಸುಗಳು ಈತನ ಹೆಸರಲ್ಲಿದೆ.

Post a Comment

0 Comments