Ticker

6/recent/ticker-posts

Ad Code

ನಾಪತ್ತೆಯಾದ ಮಧ್ಯ ವಯಸ್ಕನ ಮೃತದೇಹ ತಳಂಗರೆ ನದಿಯಲ್ಲಿ ಪತ್ತೆ

 


ಕಾಸರಗೋಡು : ನಾಪತ್ತೆಯಾಗಿರುವುದಾಗಿ ಪ್ರಕರಣ ದಾಖಲಾಗಿರುವ  ಮಧ್ಯ ವಯಸ್ಕನೋರ್ವನ ಮೃತದೇಹ ತಳಂಗರೆ ನದಿಯಲ್ಲಿ ಪತ್ತೆಯಾಗಿದೆ. ಕೋಟಿಕುಳಂನ ಮುಕ್ರಿ ಹೌಸಿನ ದಿ. ಮೂಸಾ- ಆಯಿಷಾ ದಂಪತಿಗಳ ಪುತ್ರ ಹಾಸಿಂ (55) ರ ಮೃತದೇಹ ಇದೆಂದು ಪತ್ತೆ ಹಚ್ಚಲಾಗಿದೆ. ಇವರು ಕಳೆದ ಸೋಮವಾರದಿಂದ ನಾಪತ್ತೆಯಾಗಿದ್ದರು. ಇದೀಗ ನಿನ್ನೆ ಸಂಜೆ ತಳಂಗರೆ ನದಿ ತೀರದ ಸೇತುವೆ ಅಡಿಯಲ್ಲಿ ಮೃತದೇಹ ಕಂಡು ಬಂದಿತ್ತು.ಕಳೆದ ವರ್ಷಗಳಿಂದ ವಿದೇಶ ಉದ್ಯೋಗಿಯಾಗಿದ್ದ ಇವರು ಈ ನಡುವೆ ಊರಿಗೆ ಆಗಮಿಸಿ ವಯರಿಂಗ್  ಹಾಗೂ ಪ್ಲಂಬರ್ ಕೆಲಸ ನಿರ್ವಹಿಸುತ್ತಿದ್ದರು.

Post a Comment

0 Comments