ತಾಯಿಯ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ವಿದ್ಯಾರ್ಥಿನಿಯನ್ನು ಶಾಲಾ ಸಿಬ್ಬಂದಿ ಹೊಡೆದು, ತುಳಿದು ಕೊಂದ ಅಮಾನವೀಯ ಘಟನೆ ನಡೆದಿದೆ. ಹೈದರಾಬಾದಿನ ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಈ ಪ್ರಕರಣ ವರದಿಯಾಗಿದೆ. ಮಗುವಿನ ಮೇಲೆ ಪದೇ ಪದೇ ಹಲ್ಲೆ ನಡೆಸಿ, ಕಾಲಿನಿಂದ ತುಳಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈದರಾಬಾದಿನ ಶಾಲೆಯೊಂದರ ಮಹಿಳಾ ಸಹಾಯಕ ಸಿಬ್ಬಂದಿ ಲಕ್ಷ್ಮಿ ಎಂಬಾಕೆ ಮಗುವನ್ನು ನೆಲಕ್ಕೆ ತಳ್ಳಿ, ತಲೆಗೆ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ. ಶಾಲಾ ಸಮಯದ ನಂತರ ಅದೇ ಶಾಲೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಗುವಿನ ತಾಯಿ ಮಕ್ಕಳನ್ನು ಬಿಡಲು ಹೋದಾಗ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಸಮಯದಲ್ಲಿ ಆಕೆಯ ಮಗಳು ಶಾಲೆಯ ಆವರಣದೊಳಗೆ ಇದ್ದಳು.
ಜೀಡಿಮೆಟ್ಲಾ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾರ, ಮಗುವಿನ ತಾಯಿ ಹಾಗೂ ಈ ಸಿಬ್ಬಂದಿ ನಡುವೆ ದ್ವೇಷ ಇರಬಹುದು ಎಂದು ಹೇಳಲಾಗುತ್ತಿದೆ. ಈ ಬಾಲಕಿಯ ತಾಯಿ ತನ್ನ ಕೆಲಸವನ್ನು ಕಸಿದುಕೊಳ್ಳಬಹುದು ಎನ್ನುವ ಭಯ ಆಕೆಗೆ ಇರಬಹುದು ಎನ್ನಲಾಗಿದೆ. ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

0 Comments