Ticker

6/recent/ticker-posts

Ad Code

ಸ್ನಾನಗೃಹದಲ್ಲಿ ಕುಸಿದು ಬಿದ್ದು ಯುವತಿ ಸಾವು

 

ಕಾಸರಗೋಡು: ಸ್ನಾನಕ್ಕೆಂದು ತೆರಳಿದ ಯುವತಿಯೋರ್ವಳು ಸ್ನಾನಗೃಹದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಪರಪ್ಪ ವೆಲ್ಲರಿಕುಂಡುವಿನಲ್ಲಿ ನಡೆದಿದೆ. ನಯನಾ (25) ಮೃತ ದುರ್ದೈವಿ. ಈಕೆ  ನಾರಾಯಣನ್ ಮತ್ತು ಮಾಧವಿ ದಂಪತಿಯ ಪುತ್ರಿ. ಸೋಮವಾರ  ಈ ಘಟನೆ ನಡೆದಿದೆ. ತಕ್ಷಣ ಪರಪ್ಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಅವಿವಾಹಿತರಾಗಿದ್ದ ಈಕೆ  ಸಹೋದರಿಯರಾದ ನೀನಾ, ನಂದನ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Post a Comment

0 Comments