ಮಾರ್ಪನಡ್ಕ : ಕುಂಬ್ಡಾಜೆ ಗ್ರಾಮ ಪಂಚಾಯತಿನ ಆಶ್ರಯದಲ್ಲಿ 'ಇಕೋ ಸೆನ್ಸ್ ಸ್ಕಾಲರ್ ಶಿಪ್ ಪಠನೋತ್ಸವ' ಗ್ರಾಮ ಪಂಚಾಯತ್ ಹಾಲ್ ನಲ್ಲಿ ಜರಗಿತು. ಕುಂಬ್ಡಾಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ ಯಶೋದಾ ಎನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಶಂಕರ ರೈ ಮವ್ವಾರು ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕುಂಬ್ಡಾಜೆ ಗ್ರಾಮ ಪಂಚಾಯತಿನ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

0 Comments