Ticker

6/recent/ticker-posts

Ad Code

ಬಸ್ ನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಇಬ್ಬರು ಬಸ್ ಪ್ರಯಾಣಿಕರ ಬಂಧನ

 

ಕಾಸರಗೋಡು : ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಗಾಂಜಾ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಅಸ್ಸಾಂ ಮೂಲದ ಮೆಹಬೂಜ್ ಅಹ್ಮದ್ ಲಸ್ಕರ್ (26), ಮಧೂರು ಸಮೀಪದ ಪೆರಿಯಡ್ಕದ  ಎ.ಕೆ. ಮನ್ಸೂರ್ (35) ಬಂಧಿತರು. ಅಸ್ಸಾಂ ಮೂಲದ ವ್ಯಕ್ತಿಯಿಂದ 15 ಗ್ರಾಂ ಮತ್ತು ಪೆರಿಯಡ್ಕದ  ವ್ಯಕ್ತಿಯಿಂದ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್ಆರ್‌ಟಿಸಿ ಬಸ್‌ನಿಂದ ಮೆಹಬೂಜ್ ಅಹ್ಮದ್ ಲಸ್ಕರ್ ಅವರನ್ನು ಬಂಧಿಸಲಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್ ಜಿ. ಆದರ್ಶ್, ಸಹಾಯಕ ಇನ್ಸ್‌ಪೆಕ್ಟರ್ ಎ.ಬಿ. ಅಬ್ದುಲ್ಲಾ ಮತ್ತು ನಾಗರಿಕ ಅಬಕಾರಿ ಅಧಿಕಾರಿ ನಾಸರುದ್ದೀನ್ ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸಿದ್ದಾರೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮನ್ಸೂರ್ ಪ್ರಯಾಣಿಕನಾಗಿದ್ದ. ಅಬಕಾರಿ ತಂಡದಲ್ಲಿ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿಲ್ ಕುಮಾರ್, ಸಹಾಯಕ ಇನ್ಸ್‌ಪೆಕ್ಟರ್ ಇ.ಕೆ. ಬಿಜೋಯ್ ಮತ್ತು ಪ್ರಿವೆಂಟಿವ್ ಆಫೀಸರ್ ಕೆ.ಆರ್. ಪ್ರಜಿತ್ ಇದ್ದರು.

Post a Comment

0 Comments