Ticker

6/recent/ticker-posts

Ad Code

ಪೆರ್ಲದ ಅಡ್ಕ ಅಂಗನವಾಡಿ ಪರಿಸರದಲ್ಲಿ ಬೆಂಕಿ ಅನಾಹುತ : ಪಂಚಾಯತ್ ಅಧಿಕೃತರ ಸಹಕಾರದೊಂದಿಗೆ ಶಮನ

ಪೆರ್ಲ :  ಎಣ್ಮಕಜೆ ಗ್ರಾಮ ಪಂಚಾಯತ್ ನ ಅಡ್ಕ ಅಂಗನವಾಡಿ ಪರಿಸರ ಪ್ರದೇಶದಲ್ಲಿ ಇಂದು ಮಧ್ಯಾಹ್ನ‌‌ ವೇಳೆಗೆ ಅಗ್ನಿ ಅನಾಹುತ ಸಂಭವಿಸಿದ್ದು ಪಂಚಾಯತು ಅಧಿಕೃತರ ಮತ್ತು ಊರವರ ಸಕಾಲಿಕ ಸ್ಪಂದನೆಯಿಂದ ಬೆಂಕಿ ಶಮನ ಪ್ರಕ್ರಿಯೆ ನಡೆಯಿತು. ಅಂಗನವಾಡಿ ಅಧ್ಯಾಪಕಿ ಎಣ್ಮಕಜೆ ಪಂ. ಹೆಲ್ತ್ ಇನ್ಸ್ ಪೆಕ್ಟರ್ ಬಾಬು ರಾಜ್ ಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ತೆರಳಿದ ಪಂ.ಅಧಿಕೃತರು ಸ್ಥಳೀಯರ ಜತೆಗೂಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಅಗ್ನಿ ಶಾಮಕ ದಳಕ್ಕೂ ಕರೆ ಮಾಡಿದ್ದು, ಉಪ್ಪಳದಿಂದ ಅಗ್ನಿ ಶಾಮಕ ದಳ ತಲುಪುವಷ್ಟರಲ್ಲಿ ಊರವರೇ ಬೆಂಕಿಯನ್ನು ಭಾಗಿಕವಾಗಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಪಂಚಾಯತ್ ಅಸಿಸ್ಟೆಂಟ್ ಕಾರ್ಯದರ್ಶಿ ಗಿರೀಶ್, ಉದ್ಯೋಗಿ ಪ್ರಮೋದ್, ಹರಿತ ಕರ್ಮ ವಾಹನ ಚಾಲಕ ಇಬ್ರಾಹಿಂ ಪೆರ್ಲ ಮೊದಲಾದವರು ಕಾರ್ಯಚರಣೆಗೆ ನೇತೃತ್ವ ನೀಡಿದರು.

Post a Comment

0 Comments