Ticker

6/recent/ticker-posts

Ad Code

ಜೈಲು ವಾಸದ ವ್ಯಾಮೋಹದಿಂದ ಕಲೆಕ್ಟರೇಟ್‌ನಲ್ಲಿ ಬಾಂಬ್ ಇಟ್ಟಿರುವ ಹುಸಿ ಬೆದರಿಕೆಯೊಡ್ಡಿದ ಮಧ್ಯವಯಸ್ಕ

 

ಕೊಲ್ಲಂ : ಜೈಲು ವಾಸ ಅನುಭವಿಸುವ ವ್ಯಾಮೋಹದಿಂದ ಮಧ್ಯ ವಯಸ್ಕನೋರ್ವ  ಕೊಲ್ಲಂ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕಲೆಕ್ಟರೇಟ್‌ನಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ತಿಳಿಸಿದ್ದು ಈತನನ್ನು ಪೋಲಿಸರು ಬಂಧಿಸಿ ವಿಚಾರಿಸಿದಾಗ ಅಸಲಿ ಕತೆ ಬಯಲಿಗೆ ಬಂದಿದೆ. ಜೈಲಿಗೆ ಹೋಗಲು ಸುಲಭವಾದ ಮಾರ್ಗವನ್ನು ರೂಪಿಸಿದ ಈತ ಕಲೆಕ್ಟರೇಟಿಗೆ ಬಾಂಬ್ ಇರಿಸಿರುವುದಾಗಿ ತಿಳಿಸಿದ್ದು 50 ನಿಮಿಷಗಳಲ್ಲಿ ಹಿಡಿಯದಿದ್ದರೆ ಬಾಂಬ್ ಸ್ಫೋಟಗೊಳಿಸುವುದಾಗಿ ಬೆದರಿಕೆ ಹಾಕಿದನು. ಗುರುವಾರ ಆ ವ್ಯಕ್ತಿ ಮಾಡಿದ ಬೆದರಿಕೆಯ ನಂತರ, ಪೊಲೀಸರು, ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳ ಕಲೆಕ್ಟರೇಟ್‌ಗೆ ತಲುಪಿ ಪ್ರತಿಯೊಂದು ಮೂಲೆಯನ್ನೂ ಹುಡುಕಿದರು, ಆದರೆ ಬಾಂಬ್ ಪತ್ತೆಯಾಗದೆ ಹಿಂತಿರುಗಿದರು. ನಂತರ ನಡೆಸಿದ ತನಿಖೆಯಲ್ಲಿ, ಕರೆ ಮಾಡಿದ ವ್ಯಕ್ತಿ ಮಯ್ಯನಾಡಿನ ಮುಕ್ಕಂ ವಲಿಯಾಝಿಕಂನ 44 ವರ್ಷದ ಪ್ರಮೋದ್ ಎಂದು ಗುರುತಿಸಲಾಯಿತು. ಇದರಂತೆ ಕಂಟ್ರೋಲ್ ರೂಮ್ ಪೊಲೀಸರು, ಮಯ್ಯನಾಡಿನ ವ್ಯಾಪ್ತಿಗೆ ಬರುವ ಎರವಿಪುರಂ ಪೊಲೀಸರೊಂದಿಗೆ, ತಕ್ಷಣವೇ ಪ್ರಮೋದ್ ಅವರ ಮನೆಗೆ ಹೋದರು.  ಪೊಲೀಸರ ಬರುವಿಕೆಗಾಗಿ ಕಾಯುತ್ತಿರುವಂತಿದ್ದ ಪ್ರಮೋದ್  ಪೊಲೀಸರು ಮನೆಗೆ ತಲುಪಿದ ತಕ್ಷಣ,  ಎದ್ದು ಪೊಲೀಸರ ಬಳಿಗೆ ಹೋಗಿ ಹೋಗುವ ಎಂದನಂತೆ. ಪ್ರಮೋದ್ ನ ಮಾತು ಕೇಳಿ ಪೊಲೀಸರು ಆಶ್ಚರ್ಯಚಕಿತರಾದರು.ಎಲ್ಲಿಗೆ ಎಂದಾಗ, ಪ್ರಮೋದ್ ಯಾವುದೇ ಭಯವಿಲ್ಲದೆ "ಜೈಲಿಗೆ" ಎಂದು ಉತ್ತರಿಸಿದನಂತೆ.  ಪೊಲೀಸರು ಏಕೆ ಎಂದು ಕೇಳಿದಾಗ, ಶುದ್ಧ ಹೃದಯದ ಪ್ರಮೋದ್ ಪೊಲೀಸರಿಗೆ ಕರೆ ಮಾಡಿದ  ಮತ್ತು ಕಲೆಕ್ಟರೇಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ  ವಿಷಯ ತಿಳಿಸಿದನಂತೆ. ಅದಾದ ನಂತರ, ಸ್ವಲ್ಪ ದುಃಖದಿಂದ ಮನೆ ಮತ್ತು ಸುತ್ತಮುತ್ತಲಿನ ಕಡೆಗೆ ತೋರಿಸುತ್ತಾ ಪ್ರಮೋದ್ ಪೊಲೀಸರಿಗೆ ಹೇಳಿದನಂತೆ  "ನೀವು ನನ್ನ ಮನೆಯನ್ನು ನೋಡಲಿಲ್ಲವೇ? ಯಾವುದೇ ಸೌಲಭ್ಯವಿಲ್ಲ. ನಾನು ಜೈಲಿನಲ್ಲಿದ್ದರೆ, ನಾನು ಬೇರೆ ಏನೂ ಇಲ್ಲದೆ ಆರಾಮವಾಗಿ ಬದುಕಬಹುದೆಂದು ಭಾವಿಸುತ್ತೇನೆ. ಸಾಧ್ಯವಾದಷ್ಟು ಕಾಲ ಜೈಲಿನಲ್ಲಿ ಇರಬಹುದೆಂದು ನಾನು ಬಯಸುತ್ತೇನೆ'' ಎಂದನಂತೆ.  ಪ್ರಮೋದ್ ಮಾನಸಿಕ ಸಮಸ್ಯೆ ಹೊಂದಿದ್ದಾನೆ ಮತ್ತು ದಿನಂಪ್ರತಿ ಮದ್ಯದ ಅಮಲಿನಲ್ಲಿ ಇರುತ್ತಾನೆ ಎಂದು ಈತನ ಕುಟುಂಬ ಪೊಲೀಸರಿಗೆ ತಿಳಿಸಿದೆ. ಪ್ರಮೋದ್ ಕುಡಿತದಿಂದ ನಿರಂತರ ಸಮಸ್ಯೆಗಳನ್ನು ಉಂಟುಮಾಡುವ ವ್ಯಕ್ತಿ ಎಂದು ಪೊಲೀಸರು ದೃಢಪಡಿಸಿದರು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

Post a Comment

0 Comments