ಕಾಸರಗೋಡು: 14 ವರ್ಷದ ಬಾಲಕಿಯನ್ನು ಬೈಕ್‌ಗೆ ಹತ್ತಿಸಿ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ 28 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಮತ್ತೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕಾಸರಗೋಡು ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ಸಂತೋಷ್ ಕುಮಾರ್ ಅವರು ಕುಟ್ಟಿಕೋಲ್, ಪತ್ತಿಕ್ಕಲ್ ಕ್ವಾರ್ಟರ್ಸ್ ನಿವಾಸಿ ಚಿರಕ್ಕಲ್ ಹೌಸ್‌ನ ಸಿ.ಎಂ. ಮುನೀರಿ (46) ಅವರಿಗೆ ಶಿಕ್ಷೆ ವಿಧಿಸಿದ್ದಾರೆ. ಈ ಘಟನೆ ಜುಲೈ 10, 2022 ರಂದು ನಡೆದಿತ್ತು. ಬಕ್ರೀದ್ ಆಚರಣೆಗಾಗಿ ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆಂದು ಬಾಲಕಿಯ ಪೋಷಕರನ್ನು ನಂಬಿಸಿ ನಂತರ ಬಾಲಕಿಯನ್ನು ಬೈಕ್‌ನಲ್ಲಿ ನಿರ್ಜನ ಪ್ರದೇಶದ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಪ್ರಕರಣದ ಆರಂಭಿಕ ಹಂತದ ತನಿಖೆಯನ್ನು ಆಗಿನ ಮೇಲ್ಪರಂಬ ಇನ್ಸ್‌ಪೆಕ್ಟರ್ ಟಿ ಉತ್ತಮದಾಸ್ ನಡೆಸಿದ್ದರು. ಆಗಿನ ಬೇಡಗಂ ಪೊಲೀಸ್ ಇನ್ಸ್‌ಪೆಕ್ಟರ್ ಟಿ ದಾಮೋದರನ್ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದರು. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಕೆ. ಪ್ರಿಯಾ ಮತ್ತು ಮಹಿಳಾ ಎಎಸ್‌ಐ ಸುಜಾತಾ ನ್ಯಾಯಾಲಯದಲ್ಲಿ ಹಾಜರಾಗಿದ್ಷರು.

0 Comments